- +91 73497 60202
- [email protected]
- November 23, 2024 1:02 AM
ಅಮೆಜಾನ್ ಕಾಡಿನಲ್ಲಿ ನಿಗೂಢ ನಗರ ಪತ್ತೆ..! 3,000 ವರ್ಷ ಹಳೇಯ ವೈಭವಯುತ ಪಟ್ಟಣದಲ್ಲೇನಿದೆ?
ನ್ಯೂಸ್ ನಾಟೌಟ್: ಅಮೆಜಾನ್ ಕಾಡು ಸದಾ ನಿಗೂಢತೆಗಳನ್ನು ತನ್ನೊಳಗೆ ಬಚ್ಚಿಟ್ಟ ದಟ್ಟ ಕಾಡು. ಅಧ್ಯಯನಕ್ಕೆ ತೆರಳಿದ್ದ ಪುರಾತತ್ವ ಇಲಾಖೆ ಅದಿಕಾರಿಗಳು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದು, ಜನತ್ತಿನ ಇತಿಹಾಸಕ್ಕೆ ಮತ್ತೊಂದು ಪುಟ ಸೇರ್ಪಡೆಯಾದಂತಿದೆ. ಬರೋಬ್ಬರಿ 3,000 ವರ್ಷಗಳ ಹಳೇ ನಗರವೊಂದು ಅಮೆಜಾನ್ ದಟ್ಟಾರಣ್ಯದಲ್ಲಿ ಪತ್ತೆಯಾಗಿದ್ದು, ಸುಸಜ್ಜಿತ, ರಸ್ತೆ, ಕಟ್ಟಡ ಸೇರಿದಂತೆ ಎಲ್ಲಾ ವ್ಯವಸ್ಥೆಗಳ ನಗರ ಇದಾಗಿದೆ. ಈ ಸಂಶೋಧನೆಯಿಂದ ಇದೀಗ ಅಮೆಜಾನ್ ಕಾಡಿನಲ್ಲಿ ಜನವಸತಿ ಇತ್ತು ಅನ್ನೋದು ದೃಢಪಟ್ಟಿದೆ. ಅಮೆಜಾನ್ ಕಾಡಿನಲ್ಲಿ ಜನರು ಮನೆ, ಕಟ್ಟಡ, ನಗರ ಕಟ್ಟಿ ವಾಸಿಸಿದ ಕುರುಹಗಳಿಲ್ಲ ಎಂದೇ ಭಾವಿಸಲಾಗಿತ್ತು. ಈ ವರೆಗೆ ಬುಡುಕಟ್ಟು ಸಮುದಾಯ, ಕಾಡಿನ ಜನರು ವಾಸಗಳು ಪತ್ತೆಯಾಗಿದೆ. ಆದರೆ ಈ ಸಮುದಾಯ ಕೂಡ ನಶಿಸಿ ಹೋಗಿದೆ ಅನ್ನೋದ ವರದಿಗಳೂ ಪ್ರಕಟವಾಗಿತ್ತು. ಆದರೆ ಇದೀಗ ಈಕ್ವೇಡಾರ್ ಭಾಗದಲ್ಲಿ ಬರವು ಅಮೆಜಾನ್ ಕಾಡಿನ ನಡುವೆ ಈ ನಗರ ಪತ್ತೆಹಚ್ಚಲಾಗಿದೆ. ವಿಶೇಷ ಅಂದರೆ ಈಗ ಪತ್ತೆಯಾಗಿರುವ ಈ ಹಳೇ ನಗರದಿಂದ ಈಕ್ವೇಡಾರ್‌ನ ಉಪಾನೋ ಕಣಿವೆಯನ್ನು ಸಂಪರ್ಕಿಸುವ ರಸ್ತೆಗಳಿವೆ. 3000 ಸಾವಿರ ವರ್ಷಗಳ ಹಳೇ ಕಟ್ಟಡ, ರಸ್ತೆ, ಕಣಿವೆ ಎಲ್ಲವೂ ಈ ನಗರದ ವೈಭವವನ್ನು ಸಾರುತ್ತಿವೆ. ರಿಮೂಟ್ ಸೆನ್ಸಿಂಗ್ LiDAR, ಲೇಸರ್ 3ಡಿ ಸ್ಕ್ಯಾನಿಂಗ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ನಗರ ಪತ್ತೆಹಚ್ಚಲಾಗಿದೆ. ಈ ಸಂಶೋಧನೆಯ ನೇತೃತ್ವವಹಿಸಿದ ಫ್ರಾನ್ಸ್ ನ್ಯಾಷನಲ್ ಸೆಂರ್ ಫಾರ್ ಸೈಂಟಿಫಿಕ್ ರಿಸರ್ಚ್ ನಿರ್ದೇಶಕ ಪ್ರೊಫೆಸರ್ ಸ್ಟೀಫನ್ ರೋಸ್ಟೇನ್ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಅಮೆಜಾನ್ ಕಾಡಿನಲ್ಲಿ ಇಷ್ಟು ದಿನ ಬುಡಕಟ್ಟು ಸಮುದಾಯದ ಜನರು ವಾಸಿಸುವುದನ್ನು ಅಧ್ಯಯನ ನಡೆಸಲಾಗಿದೆ. ನಗರ, ಆಧುನಿಕತೆ, ಮನೆ ಈ ರೀತಿಯ ಯಾವುದೇ ವಿಷಗಳ ಅರಿವೇ ಇಲ್ಲ. ಕಾಡಿನಲ್ಲಿ ಕಾಡು ಪ್ರಾಣಿಗಳಂತೆ ಬದುಕುತ್ತಿದ್ದ ಸಮುದಾಯ ಇದಾಗಿದೆ. ಆದರೆ ಇದೇ ಕಾಡಿನಲ್ಲಿ 3,000 ವರ್ಷಗಳ ಹಿಂದೆ ನಗರ ಪ್ರದೇಶದಲ್ಲಿ ಜನವಸತಿ ಇತ್ತು. ಇಲ್ಲಿ ಎಲ್ಲಾ ಸೌಲಭ್ಯ ಒಳಗೊಂಡ ನಗರ ಪ್ರದೇಶದ ವ್ಯವಸ್ಥೆಗಳಲ್ಲಿ ಜನರು ವಾಸಿಸಿದ್ದಾರೆ ಅನ್ನೋದು ಖಚಿತಗೊಂಡಿದೆ ಎನ್ನಲಾಗಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ