ನ್ಯೂಸ್ ನಾಟೌಟ್ : ಕೊಡಗಿನ ಕುವರಿ, ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿತ್ತು. ಆದರೆ ಈ ವಿಡಿಯೋ ಹಿಂದಿರುವ ಶಂಕಿತರ ಮೇಲೆ ಪೊಲೀಸರು ಬೆನ್ನು ಬಿದ್ದಿದ್ದರು. ರಶ್ಮಿಕಾ ಮಂದಣ್ಣ ಡೀಪ್- ಫೇಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಆಂಧ್ರ ಪ್ರದೇಶದಲ್ಲಿ ಇದೀಗ ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾದೆ.
ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ಡೀಪ್-ಫೇಕ್ ವಿಡಿಯೋವೊಂದು 2023 ನವೆಂಬರ್ನಲ್ಲಿ ವೈರಲ್ ಆಗಿತ್ತು. ಬ್ರಿಟನ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ಝಾರಾ ಪಟೇಲ್ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ದೇಶಾದ್ಯಂತ ಡೀಪ್ ಫೇಕ್ ವಿಡಿಯೋಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಕೇಳಿ ಬಂದಿದ್ದವು. ಬಿಗ್ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕ ಸ್ಟಾರ್ ನಟ ನಟಿಯರು ಖಂಡಿಸಿದ್ದರು. ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರ ಕೂಡ ಡೀಪ್ ಫೇಕ್ ವಿಡಿಯೋಗಳ ನಿಯಂತ್ರಣಕ್ಕೆ ಮುಂದಾಗಿತ್ತು.
ಈ ಬೆನ್ನೆಲ್ಲೆ ಝಾರಾ ಪಟೇಲ್ ಯಾರು ಅನ್ನೋದರ ಬಗ್ಗೆ ತೀವ್ರ ಹುಡುಕಾಟ ನಡೆದಿತ್ತು. ಎಲ್ಲೆಡೆ ಭಾರೀ ಚರ್ಚೆ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ಝಾರಾ ಪಟೇಲ್, ರಶ್ಮಿಕಾ ಮಂದಣ್ಣ ಯಾರೆಂದು ನನಗೆ ಗೊತ್ತಿಲ್ಲ. ಕೊನೆಗೆ ಹೇಳಿಕೆ ಬಿಡುಗಡೆ ಮಾಡಿದ್ದ ,ಝಾರಾ ಪಟೇಲ್ ವಿಡಿಯೋದಲ್ಲಿ ಇರುವುದು ನಾನೇ. ಆದರೆ ಏನಾಗುತ್ತಿದೆಯೋ ಅದರಿಂದ ನನಗೆ ಬೇಸರವಾಗಿದೆ. ನನ್ನ ವಿಡಿಯೋ ಬಳಸಿಕೊಂಡು ಡೀಪ್ ಫೇಕ್ ವಿಡಿಯೋ ಸೃಷ್ಟಿ ಮಾಡಿರೋದು ನನ್ನ ಗಮನಕ್ಕೆ ಬಂದಿದೆ.
ಫೇಮಸ್ ಬಾಲಿವುಡ್ ನಟಿಯ ಮುಖದ ವಿಡಿಯೋ ಬಳಸಿಕೊಂಡು ಯಾರೋ ಈ ವಿಡಿಯೋ ಸೃಷ್ಟಿ ಮಾಡಿದ್ದಾರೆ. ಈ ಡೀಪ್ ಫೇಕ್ ವಿಡಿಯೋದಲ್ಲಿ ನಾನು ಭಾಗಿಯಾಗಿಲ್ಲ ಎಂದಿದ್ದರು. ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋದ ತನಿಖೆಯನ್ನು ಮುಂದುವರೆಸಿದ್ದ ದೆಹಲಿ ಪೊಲೀಸರು ಕೊನೆಗೂ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 465, 469, 66C 66E ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದಾರೆ. ಸದ್ಯ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.