- +91 73497 60202
- [email protected]
- November 23, 2024 10:25 AM
11 ದಿನಗಳ ವ್ರತ ಅಂತ್ಯಗೊಳಿಸಿದ ನರೇಂದ್ರ ಮೋದಿ, ಇಲ್ಲಿದೆ ವಿಡಿಯೋ
ನ್ಯೂಸ್ ನಾಟೌಟ್ : ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ 51 ಇಂಚಿನ ಬಾಲರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರಿತು ಇದರೊಂದಿಗೆ ಮಂದಿರದ ಉದ್ಘಾಟನೆಯೂ ನಡೆಯಿತು. ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಪೂರ್ಣಗೊಳಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ತಮ್ಮ 11 ದಿನಗಳ ಉಪವಾಸವನ್ನು ಕೊನೆಗೊಳಿಸಿದರು. ಸ್ವಾಮಿ ಗೋವಿಂದ್ ದೇವ್ ಪ್ರಧಾನಿಗೆ ಚರಣಾಮೃತವನ್ನು ಕುಡಿಸುವ ಮೂಲಕ ಹನ್ನೊಂದು ದಿನಗಳ ಕಾಲ ಆಚರಣೆ ಮಾಡಿದ್ದ ವೃತವನ್ನು ಸಮಾಪ್ತಿ ಮಾಡಿದರು. ಇದಕ್ಕೂ ಮುನ್ನ ತಮ್ಮ ಭಾಷಣದ ವೇಳೆ ಭಾವುಕರಾಗಿ ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ ಸಂತರು, ಛತ್ರಪತಿ ಶಿವಾಜಿ ಮಹಾರಾಜರ ನಂತರ ಕಠೋರ ತಪಸ್ಸಿಗೆ ಹೆದರದ ಇಂತಹ ರಾಜ ದೇಶಕ್ಕೆ ಸಿಕ್ಕಿದ್ದಾರೆ ಎಂದು ಹೇಳಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪ್ರಧಾನಿ ಅವರಿಗೆ ಮೂರು ದಿನ ಉಪವಾಸ ಮಾಡಬೇಕು ಎಂದು ಹೇಳಿದ್ದೆವು ಆದರೆ ನಮ್ಮ ಪ್ರಧಾನಿ 11 ದಿನ ಉಪವಾಸ ಮಾಡಿದರು. ನಾವು ಒಂದು ಹೊತ್ತಿನ ಊಟ ಮಾಡೋಣ ಎಂದು ಕೇಳಿದಾಗ ಅವರು ಆಹಾರ ತ್ಯಜಿಸಿ ಹಣ್ಣುಗಳನ್ನೇ ತಿಂದರು. ನಾವು ಅವರಿಗೆ ಒಂದು ಹೊದಿಕೆಯೊಂದಿಗೆ ಮಲಗಲು ಹೇಳಿದೆವು ಆದ್ದರಿಂದ ಅವರು ಇಡೀ ಆಚರಣೆಯ ಸಮಯದಲ್ಲಿ ಅದೇ ಹೊದಿಕೆಯಲ್ಲಿ ಮಲಗಲು ವಾಗ್ದಾನ ಮಾಡಿದರು. ಇಲ್ಲಿನ ಚಳಿಯನ್ನೂ ಲೆಕ್ಕಿಸದೆ ಕಠಿಣ ವೃತವನ್ನು ಆಚರಿಸುವ ಮೂಲಕ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಎಂದು ಸ್ವಾಮೀಜಿ ಹೇಳಿದ್ದಾರೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ