ನ್ಯೂಸ್ ನಾಟೌಟ್ :ಈ ಪ್ರಪಂಚದಲ್ಲಿ ಎಂಥೆಂಥಾ ವಿಚಿತ್ರ ಘಟನೆಗಳು ನಡಿತಾನೇ ಇರುತ್ತೆ.ವೈದ್ಯ ಲೋಕಕ್ಕೂ ಸವಾಲಾಗಿ ಪರಿಣಮಿಸು ಅನೇಕ ಘಟನೆಗಳನ್ನು ಈ ಹಿಂದೆಯೂ ಕೇಳಿರಬಹುದು.ಆದರೆ ಈ ಘಟನೆ ಮಾತ್ರ ಕೊಂಚ ಡಿಫರೆಂಟ್ ಎಂಬಂತಿದೆ. ಅದಕ್ಕೆ ಕಾರಣ 32 ವರ್ಷ ವಯಸ್ಸಿನ ಅಮೆರಿಕ ಮಹಿಳೆ.ಈ ಮಹಿಳೆ ಎರಡು ದಿನಗಳ ಅಂತರದಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಷ್ಟೇ ಅಲ್ಲ, ಬರೋಬ್ಬರಿ 20 ಗಂಟೆಗಳ ಕಾಲ ಈಕೆ ಪ್ರಸವ ವೇದನೆ ಅನುಭವಿಸಿದ್ದಾರಂತೆ..!
ಕೆಲ್ಸೆ ಹ್ಯಾಚರ್ ಎಂಬ ಮಹಿಳೆ ಇದೀಗ ಇಬ್ಬರು ಮಕ್ಕಳನ್ನು ಪಡೆದ ಸಂಭ್ರಮದಲ್ಲಿದ್ದಾರೆ. ಆದರೆ, ಈ ಮಕ್ಕಳ ಜನನ ಕೂಡಾ ಪವಾಡ ಎಂದೇ ಹೇಳಲಾಗಿದೆ..! ಇದೊಂದು ಘಟನೆ ಅಚ್ಚರಿಗೆ ಕಾರಣವಾಗಿದ್ದು,ಈ ಮಹಿಳೆಗೆ ಜನಿಸಿದ ಮಕ್ಕಳನ್ನು ಕೋಟಿಗೊಂದು ಶಿಶು ಎಂದೇ ವಿಶ್ಲೇಷಿಸಲಾಗಿದೆ. ಕೆಲ್ಸೆ ಹ್ಯಾಚರ್ ಅವರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.
ಅಮೆರಿಕದ ಅಲಬಾಮಾ ವಿಶ್ವ ವಿದ್ಯಾಲಯದಲ್ಲಿ ಇರುವ ಬಿರ್ಮಿಂಗ್ ಹ್ಯಾಮ್ ಆಸ್ಪ್ರತ್ರೆಯಲ್ಲಿ ಈಕೆ ಎರಡು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.ಎರಡು ದಿನಗಳ ಅಂತರದಲ್ಲಿ ಜನಿಸಿದ ಈ ಅವಳಿ ಮಕ್ಕಳಿಗೆ ರೋಕ್ಸಿ ಹಾಗೂ ರಿಬೆಲ್ ಎಂದು ಹೆಸರಿಸಲಾಗಿದೆ. ಮೊದಲ ಮಗು ಡಿಸೆಂಬರ್ 19 ರಂದು ಜನ್ಮ ದಿನ ಆಚರಿಸಿದರೆ, ಎರಡನೇ ಮಗು ಡಿಸೆಂಬರ್ 20 ರಂದು ಜನ್ಮ ದಿನ ಆಚರಿಸಲಿದೆ.ವೈದ್ಯಕೀಯವಾಗಿ ಈ ರೀತಿಯ ವಿದ್ಯಮಾನವನ್ನು ಡಿಡೆಲ್ಫಿಸ್ ಎಂದು ಕರೆಯಲಾಗುತ್ತದೆ. ಎರಡು ವಿಭಿನ್ನ ಗರ್ಭ ಕೋಶಗಳಲ್ಲಿ ಶಿಶುವಿನ ಬೆಳವಣಿಗೆ ಆಗಿರುತ್ತದೆ. ಅಂದ ಹಾಗೆ ಕೆಲ್ಸೆ ಹ್ಯಾಚರ್ ಅವರಿಗೆ ಡಬಲ್ ಗರ್ಭ ಕೋಶ ಇರೋದು ಅವರಿಗೆ 17 ವರ್ಷ ಇದ್ದಾಗಲೇ ಗೊತ್ತಾಗಿತ್ತು. ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಶ್ವೇತಾ ಪಟೇಲ್ ಅವರು ಈ ಸಮಸ್ಯೆಯನ್ನು ಪತ್ತೆ ಹಚ್ಚಿದ್ರು ಎಂದು ಹೇಳಲಾಗಿದೆ.