ನ್ಯೂಸ್ ನಾಟೌಟ್: ಅಯೋದ್ಯೆಯಲ್ಲಿ (Ayodhye) ರಾಮಮಂದಿರ (Ram) ನಿರ್ಮಾಣವಾಗುತ್ತಿದ್ದು, ಜನವರಿ 22ರಂದು ಶ್ರೀ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಮಂದಿರ ನೋಡುವ ಆಸೆ ಮತ್ತು ಭಕ್ತಿಯಿಂದ ವ್ಯಕ್ತಿಯೊಬ್ಬರು ತನ್ನ ದಿವ್ಯಾಂಗ ಚೇತನರಾಗಿದ್ದರೂ ಕೂಡ ಅದನ್ನು ಲೆಕ್ಕಿಸದೆ ಅಯೋಧ್ಯೆಯ ಕಡೆ ಹೊರಟಿದ್ದಾರೆ ಎಂದು ವರದಿ ತಿಳಿಸಿದೆ.
ಸಿಂಧಗಿ (Sindagi) ಮೂಲದವಾರದ ಮಂಜುನಾಥ್ ವ್ಹೀಲ್ ಚೇರ್ನಲ್ಲಿ ತೀರ್ಥಯಾತ್ರೆಗೆ ಹೊರಟಿದ್ದಾರೆ. ಅವಘಡವೊಂದರಲ್ಲಿ ಮಂಜುನಾಥ ಕಾಲಿನ ಬಲ ಕಳೆದುಕೊಂಡರು. ಆದರೂ ಕೂಡ ಇವರ ತಿರುಗಾಟದ ಆಸೆ ಮಾತ್ರ ನಿಲ್ಲಿಸಲಿಲ್ಲ. ಲೋಕ ಸಂಚಾರ ಮಾಡುವುದೇ ಇವರ ಹವ್ಯಾಸ ಎನ್ನಲಾಗಿದೆ. ಇದೀಗ ರಾಮ ಮಂದಿರ ಉದ್ಘಾಟನೆಯ ಸುದ್ದಿ ಕೇಳಿ ಮತ್ತೆ ಉತ್ತರ ಪ್ರದೇಶದತ್ತ ಹೊರಟಿದ್ದಾರೆ.
ವೀಲ್ಹ್ ಚೇರ್ನಲ್ಲಿ ಕುಳಿತುಕೊಂಡು ಒಬ್ಬಂಟಿಯಾಗಿ ತೀರ್ಥಕ್ಷೇತ್ರಗಳ ಸಂದರ್ಶನ ಮಾಡುತ್ತಾ ಉಡುಪಿಗೆ ಬಂದಿದ್ದ ಮಂಜುನಾಥ್ ತನ್ನ ಆಸೆ ಹೇಳಿಕೊಂಡಿದ್ದಾರೆ.
ಮಂಜುನಾಥ್ ಈ ಮೊದಲು ಕೂಡ ಅಯೋಧ್ಯೆಗೆ ಹೋಗಿದ್ದರು. ಆಗ ಅಲ್ಲಿ ಅವರ ಕನಸಿನ ರಾಮ ಇರಲಿಲ್ಲ. ಈಗ ಮತ್ತೆ ರಾಮ, ಹನುಮನ ಧ್ವಜ ಕಟ್ಟಿಕೊಂಡು ವ್ಹೀಲ್ ಚೇರ್ನಲ್ಲಿ ರಾಮನನ್ನು ಕಾಣಲು ಹೊರಟಿದ್ದಾರೆ. ರಾಮಮಂದಿರಕ್ಕಾಗಿ ಈ ಹಿಂದೆ ಕರಸೇವೆಯನ್ನು ಕೂಡ ಮಾಡಿದ್ದಾರೆ ಎನ್ನಲಾಗಿದೆ.
ಕೇವಲ ಅಯೋಧ್ಯೆ ಮಾತ್ರವಲ್ಲ ಈಗಾಗಲೇ ಮಥುರ, ಹರಿದ್ವಾರ, ಕಾಶಿ, ತಿರುಪತಿ ಸೇರಿದಂತೆ ದೇಶದ ಎಲ್ಲಾ ಸುಪ್ರಸಿದ್ಧ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಬೈಕ್, ಸೈಕಲ್ಗಳಲ್ಲಿ ದೇಶ ಸಂಚಾರ ನಡೆಸಿರುವ ಇವರು, ಕಾಲಿನ ಬಲ ಕಳೆದುಕೊಂಡ ನಂತರ ವೀಲ್ಹ್ ಚೇರ್ನಲ್ಲಿ ತೀರ್ಥಯಾತ್ರೆ ನಡೆಸುತ್ತಿದ್ದಾರೆ. ಕುಟುಂಬ ಸಂಸಾರ ಎಲ್ಲ ಇದ್ದರೂ ಮಗನನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡಿರುವ ಮಂಜುನಾಥ್ ಈ ರೀತಿ ದೇಶ ಸುತ್ತುವ ನಿರ್ಧಾರ ಕೈಗೊಂಡಿದ್ದಾರೆ.