ನ್ಯೂಸ್ ನಾಟೌಟ್: ಟಿವಿ ಮುಂದೆ ಕುಳಿತು ಕೊಳ್ಳೋದೆಂದ್ರೆ ಕೆಲ ಮಹಿಳೆಯರಿಗೆ ಅದೇನೋ ಆನಂದ.. ಅದ್ರಲ್ಲೂ ಹೆಚ್ಚಾಗಿ ಸೀರಿಯಲ್ ಗೀಳಿಗೆ ಒಳಗಾಗಿ ತನ್ನ ಮನೆಯಲ್ಲಿಯೇ ನಡೆಯುವ ಘಟನೆಯಂತೆ ಬಾಯಿ ಬಾಯಿ ಬಿಟ್ಟು ಕೊಂಡು ನೋಡುತ್ತಿರುತ್ತಾರೆ. ಆದರೆ ಈ ರೀತಿ ಗಂಟೆಗಟ್ಟಲೇ ಟಿವಿಯನ್ನೇ ನೋಡೋದು ಆರೋಗ್ಯದ ಮಟ್ಟಿಗೆ ಒಳ್ಳೆಯದಾ? ಹೌದು,ಹೊಸ ಅಧ್ಯಯನವೊಂದರ ಪ್ರಕಾರ, ಟಿವಿ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವುದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
ಅಧ್ಯಯನದ ಪ್ರಕಾರ,ಸುಮ್ಮನೆ ಕುಳಿತುಕೊಳ್ಳುವುದರಿಂದ ನಮ್ಮ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಮಾತ್ರವಲ್ಲದೆ, ಸುಮ್ಮನೆ ಕುಳಿತುಕೊಳ್ಳುವುದು ನಮ್ಮ ಮಾನಸಿಕ ಆರೋಗ್ಯವನ್ನೂ ಹಾಳು ಮಾಡುತ್ತದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಯುಕೆಯಲ್ಲಿ ನಡೆಸಿದ ಈ ಅಧ್ಯಯನದಲ್ಲಿ, ಮಾನಸಿಕವಾಗಿ ಸಕ್ರಿಯವಾಗಿ ಕುಳಿತುಕೊಳ್ಳುವುದಕ್ಕಿಂತ ಭಿನ್ನವಾಗಿ, ಟಿವಿ ನೋಡುವ ಮೂಲಕ ಜನರಲ್ಲಿ ಖಿನ್ನತೆಯ ಅಪಾಯ ಶೇಕಡಾ 43 ರಷ್ಟು ಹೆಚ್ಚಾಗಿದೆ ಎಂದು ಕಂಡುಬಂದಿದೆ.ನೀವು ಕುಳಿತು ಮಾನಸಿಕವಾಗಿ ಸಕ್ರಿಯರಾಗಿದ್ದರೆ ಅದು ನಿಮಗೆ ಕಡಿಮೆ ಹಾನಿಯನ್ನುಂಟುಮಾಡುತ್ತದೆ. ಒತ್ತಡ, ಹೃದಯ ಅಪಾಯ, ಸ್ಥೂಲಕಾಯತೆಯು ನಿಮ್ಮಲ್ಲಿ ಖಿನ್ನತೆಯನ್ನು ಜಾಸ್ತಿ ಉಂಟುಮಾಡಬಹುದು,ಆದ್ದರಿಂದ ದೈಹಿಕವಾಗಿ ಸಕ್ರಿಯವಾಗಿರುವುದು ಆರೋಗ್ಯಕರವಾಗಿರುವುದು ಒಳ್ಳೆಯದು.
ದೈಹಿಕವಾಗಿ, ಮಾನಸಿಕವಾಗಿ ಸಕ್ರಿಯರಾಗಿರಬೇಕಾಗುತ್ತದೆ. ಅದಕ್ಕಾಗಿ ನೀವು ಗಂಟೆಗಳ ಕಾಲ ಟಿವಿ ನೋಡಬೇಡಿ. ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಿ, ಬೊಜ್ಜು, ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸಿ ಪ್ರತಿದಿನ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಕಾಡುವ ಅಪಾಯವನ್ನು ಕಡಿಮೆ ಮಾಡುತ್ತದೆ.ಟಿವಿ ವೀಕ್ಷಿಸಲು ನಿಮಗೆ ಸಮಯವಿದೆ ಎಂದು ಖಚಿತಪಡಿಸಿಕೊಂಡು ಕೆಲವು ಸಮಯ ಮಾತ್ರ ಮೀಸಲಿಡಿ.