ನ್ಯೂಸ್ ನಾಟೌಟ್:ನೆದರ್ಲ್ಯಾಂಡ್ ಮೂಲದ ಯುವತಿಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಉತ್ತರ ಪ್ರದೇಶ ಮೂಲದ ಯುವಕನೊಬ್ಬ ಮದುವೆಯಾಗಿರುವ ಘಟನೆ ವರದಿಯಾಗಿದೆ.ಈತ ಕೆಲಸದ ನಿಮಿತ್ತ ನೆದರ್ಲ್ಯಾಂಡ್ಗೆ ತೆರಳಿದ್ದಾಗ ಆಕೆ ಜತೆ ಪ್ರೀತಿ ಹುಟ್ಟಿದ್ದು, ಇದೀಗ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ ಫತೇಪುರದ ಹಳ್ಳಿಯೊಂದರಲ್ಲಿ ವಾಸವಾಗಿದ್ದ ಹಾರ್ದಿಕ್ ವರ್ಮಾ(32) ಫಾರ್ಮಾಸ್ಯುಟಿಕಲ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸವನ್ನು ಪಡೆದುಕೊಂಡಿದ್ದ. ಈ ಸಂದರ್ಭದಲ್ಲಿ ಅದೇ ಕಂಪನಿಗೆಂದು ಕೆಲಸಕ್ಕೆ ಬರುತ್ತಿದ್ದವಳ ಜತೆ ಪರಿಚಯವಾಗಿ ಮುಂದೆ ಪರಿಚಯ ಪ್ರೀತಿಯಾಗಿ ಬೆಳೆಯಿತು.ಇದೀಗ ನೆದರ್ಲ್ಯಾಂಡ್ ಮೂಲದ ಗೇಬ್ರಿಯೆಲಾ ದುಡಾ(21) ಅವರೊಂದಿಗೆ ಮದುವೆಯಾಗಿದ್ದು,ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇವರಿಬ್ಬರೂ ಕೂಡ ಆತ್ಮೀಯತೆಯಲ್ಲಿರೆಂದು ತಿಳಿದು ಬಂದಿದೆ. ಇಬ್ಬರಲ್ಲಿ ಪ್ರೀತಿ ಹುಟ್ಟಿದ ಬಳಿಕ ಹಾರ್ದಿಕ್ ಅವರು ತನ್ನ ಪ್ರೀತಿಯನ್ನು ಗೇಬ್ರಿಯೆಲಾ ಅವರಲ್ಲಿ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಅವರು ಕೂಡ ಹಾರ್ದಿಕ್ ಅವರನ್ನು ಇಷ್ಟಪಟ್ಟಿರುವುದನ್ನು ತಿಳಿಸಿದ್ದಾರೆ. ಇದೀಗ ಇಬ್ಬರು ಮದುವೆಯಾಗುವ ನಿಟ್ಟಿನಲ್ಲಿ ಕಳೆದ ವಾರ ಭಾರತಕ್ಕೆ ಮರಳಿದ್ದು,ಕುಟುಂಬದವರ ಒಪ್ಪಿಗೆಯ ಮೇರೆಗೆ ಅವರ ಸಮ್ಮುಖದಲ್ಲಿಯೇ ಬುಧವಾರ(ನ.29) ಹಿಂದೂ ಸಂಪ್ರದಾಯದಂತೆ ಎಲ್ಲಾ ವೈವಾಹಿಕ ವಿಧಿಗಳನ್ನು ಪೂರ್ಣಗೊಳಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಫತೇಪುರದಲ್ಲಿ ಹಾರ್ದಿಕ್ ಅವರ ಪೂರ್ವಜರ ಮನೆ ಇದ್ದು, ಅದಕ್ಕಾಗಿ ಅವರು ಅಲ್ಲಿಯೇ ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ.ಡಿಸೆಂಬರ್ 11 ರಂದು ಗಾಂಧಿನಗರದಲ್ಲಿ ಆರತಕ್ಷತೆಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಗೇಬ್ರಿಯೆಲಾ ಅವರ ತಂದೆ ಮಾರ್ಸಿನ್ ದುಡಾ, ಅವರ ತಾಯಿ ಬಾರ್ಬರಾ ದುಡಾ ಮತ್ತು ಇತರ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.ಇದೆಲ್ಲಾ ಆದ ಬಳಿಕ ಡಿ.25 ನಾವು ನೆದರ್ಲ್ಯಾಂಡ್ಗೆ ವಾಪಾಸ್ ಹೋಗಲಿದ್ದು,ಅಲ್ಲಿ ಚರ್ಚ್ ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ವಿವಾಹವಾಗಲಿದ್ದೇವೆ ಎಂದು ಹಾರ್ದಿಕ್ ತಿಳಿಸಿದ್ದಾರೆ.