ನ್ಯೂಸ್ ನಾಟೌಟ್ : ತೆಲಂಗಾಣದ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸುವ ಯೋಜನೆ ಇದೇ ತಿಂಗಳ 9 ರಿಂದ ಆರಂಭವಾಗಲಿದೆ ಎಂದು ವರದಿ ತಿಳಿಸಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ತೆಲಂಗಾಣದ ಆರ್ಟಿಸಿ ಸಿದ್ಧತೆ ನಡೆಸಿದ್ದು,TSRTC ಈ ಸಂಬಂಧ ಇಡಿ ಮುನಿಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ(ಡಿ.೭) ಕರ್ನಾಟಕಕ್ಕೆ ತೆರಳಿತ್ತು ಎನ್ನಲಾಗಿದೆ.(FREE BUS)
ಇಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ಯೋಜನೆ ಕುರಿತು ಮಾಹಿತಿಯನ್ನು ಪಡೆದಿದ್ದಾರೆ. ಈ ವೇಳೆ, ಅಧಿಕಾರಿಗಳು ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಸಾರಿಗೆ ಸೌಲಭ್ಯ ಕಲ್ಪಿಸುವುದರ ಪರಿಣಾಮ ಮತ್ತು ಸಂಸ್ಥೆಯ ಮೇಲೆ ಬೀರುವ ಆರ್ಥಿಕ ಪರಿಣಾಮದ ಕುರಿತು ಸಲಹೆಯನ್ನು ಸರ್ಕಾರದಿಂದ ಪಡೆದಿದ್ದಾರೆ. ಸಂಸ್ಥೆಯ ಎಂಡಿ ಸಜ್ಜನರ್ಗೆ ಈ ಸಂಬಂಧ ಮೂಲ ಮಾಹಿತಿಯನ್ನು ನೀಡಲಾಗಿದ್ದು, ಶುಕ್ರವಾರವೂ ಈ ಅಧ್ಯಯನ ನಡೆಯಲಿದೆ ಎಂದು ವರದಿ ತಿಳಿಸಿದೆ.
ಟಿಎಸ್ಆರ್ಟಿಸಿ ಸಜ್ಜನರ್ ಶುಕ್ರವಾರ ಮುಖ್ಯಮಂತ್ರಿ ರೇವಂತ್ ರೆಡ್ಡಿ ಜೊತೆಗೆ ಈ ಸಂಬಂದ ಚರ್ಚಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಮಹಿಳೆಯರಿಗೆ ಉಚಿತ ಬಸ್ ಸೇವೆ ಕುರಿತಾದ ಮಾಹಿತಿಯನ್ನು ಚರ್ಚಿಸಲಿದ್ದಾರೆ.
ಇದಾದ ಬಳಿಕ ಅವರು ಸಂಪೂರ್ಣ ಮಾರ್ಗಸೂಚಿಯೊಂದಿಗೆ ಯೋಜನೆ ಕುರಿತು ಘೋಷಣೆ ಮಾಡಲಿದ್ದಾರೆ. ಘೋಷಣೆಯಲ್ಲಿ ಯಾವ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಲಭ್ಯವಿದೆ. ಯಾವ ಗುರುತಿನ ಚೀಟಿಯನ್ನು ತೋರಿಸಬೇಕು ಎಂಬ ಎಲ್ಲ ಮಾಹಿತಿಯನ್ನು ಸಭೆಯ ಬಳಿಕ ತಿಳಿಸಲಿದ್ದಾರೆ ಎನ್ನಲಾಗಿದೆ.