ನ್ಯೂಸ್ ನಾಟೌಟ್: ತಮಿಳುನಾಡಿನ ಖ್ಯಾತ ನಟ ಹಾಗೂ ಡಿಎಂಡಿಕೆ ಸಂಸ್ಥಾಪಕ ನಾಯಕ ವಿಜಯಕಾಂತ್ ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. 1979ರಲ್ಲಿ ತೆರೆಕಂಡ ಇನಿಕ್ಕುಮ್ ಇಳಮೈ ಸಿನಿಮಾದ ಮೂಲಕ ಅವರು ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು.
2005ರಲ್ಲಿ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ರಾಜಕೀಯ ಪಕ್ಷ ಸ್ಥಾಪನೆ ಮಾಡಿದರು. ಅನಾರೋಗ್ಯ ಕಾರಣಗಳಿಂದ ಡಿಎಂಡಿಕೆ ಪಕ್ಷದ ಜವಾಬ್ದಾರಿಯನ್ನು ವಿಜಯಕಾಂತ್ ಪತ್ನಿ ಪ್ರೇಮಲತಾ ವಹಿಸಿಕೊಂಡಿದ್ದಾರೆ. 2015ರಲ್ಲಿ ತೆರೆಕಂಡ ತಮಿಳಿನ ‘ಸಗಪ್ತಂ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.