ನ್ಯೂಸ್ ನಾಟೌಟ್ :ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ , ತಾಲೂಕು ಆಡಳಿತ ಸುಳ್ಯ , ರಾಜ್ಯಶಾಸ್ತ್ರ ವಿಭಾಗ , ಚುನಾವಣಾ ಸಾಕ್ಷರತಾ ಸಮಿತಿ ಜಂಟಿ ಆಶ್ರಯದಲ್ಲಿ ಮತದಾರರ ನೋಂದಾವಣಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ನರೆವೇರಿಸಿದರು.ಬಳಿಕ ಮತ ಚಲಾಯಿಸುವ ಹಕ್ಕಿನ ಮಾಹಿತಿ ಮತ್ತು ಮಹತ್ವದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಸುಳ್ಯ ತಹಶೀಲ್ದಾರ್ ಮಂಜುನಾಥ್ , ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ , ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ , ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯ ಶಂಕರ್ ಹೆಚ್ , ಶಿಕ್ಷಕ ವೃಂದ – ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 18 ವರ್ಷ ತುಂಬಿದ ವಿದ್ಯಾರ್ಥಿಗಳನ್ನು ಮತದಾನ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಮಾಡಲಾಯಿತು . ಐಕ್ಯೂಎಸಿ ವಿಭಾಗದ ಸಂಚಾಲಕಿ ಡಾ. ಜಯಶ್ರೀ ಸ್ವಾಗತಿಸಿ ವಂದಿಸಿದರು.