ನ್ಯೂಸ್ ನಾಟೌಟ್ : ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿಯಿಂದ ಸುಳ್ಯಕ್ಕೆ ಪ್ರವೇಶ ಮಾಡಿರುವ ಪವಿತ್ರ ಮಂತ್ರಾಕ್ಷತೆಯ ವಿತರಣಾ ಕಾರ್ಯಕ್ರಮವು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.
ಮಂತ್ರಾಕ್ಷತೆಯನ್ನು ಪೂರ್ಣ ಕುಂಭದೊಂದಿಗೆ ಶ್ರೀ ರಾಮ್ ಪೇಟೆಯ ಶ್ರೀ ರಾಮ ಭಜನಾ ಮಂದಿರದಿಂದ ಕಾಲ್ನಡಿಗೆಯ ಮೂಲಕ ದುರ್ಗಾಪರಮೇಶ್ವರಿ ಮಂದಿರಕ್ಕೆ ತರಲಾಯಿತು. ಬಳಿಕ ಪುರೋಹಿತ್ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ಮಂತ್ರಾಕ್ಷತೆಯ ಕುಂಭಕ್ಕೆ ಪೂಜೆಯು ನೆರವೇರಿತು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಗುರುದೇವಾನಂದ ಸ್ವಾಮೀಜಿ ಪ್ರಾಸ್ತಾವಿಕ ಬೋಧನೆಗಳನ್ನು ನೀಡಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಸಚಿವ ಎಸ್ಅಂಗಾರ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ,ಪುತ್ತೂರು ಜಿಲ್ಲಾ ಬಜರಂಗದಳ ಸಹ ಸಂಚಾಲಕ ಲತೀಶ್ ಗುಂಡ್ಯ, ವಿಶ್ವ ಹಿಂದೂ ಪರಿಷತ್ ಬಜರಂಗದಳದ ಅಧ್ಯಕ್ಷ ಸೋಮಶೇಖರ ಪೈಕ, ಕಾರ್ಯದರ್ಶಿ ನವೀನ್ ಎಲಿಮಲೆ , ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನವೀನ್ ನರ್ಲೆ,ನಿಖೇಶ್ ಉಬರಡ್ಕ, ವರ್ಶಿತ್ ಚೊಕ್ಕಾಡಿ, ಹಿಂದೂ ಮುಖಂಡರು , ತಾಲೂಕಿನ ವಿವಿಧಸಂಘಟನೆಯ ಕಾರ್ಯಕರ್ತರು ಹಾಗೂ ಭಕ್ತರು ಆಗಮಿಸಿದ್ದರು.
ನ.30 ರಂದು ಪುತ್ತೂರಿನಿಂದ ಎಡನೀರು ಮಠದ ಸ್ವಾಮೀಜಿಯವರು ಸುಳ್ಯದ ಸಂಘಟನೆಯ ಕಾರ್ಯಕರ್ತರಿಗೆ ಮಂತ್ರಾಕ್ಷತೆಯ ಕಲಶವನ್ನು ಹಸ್ತಾಂತರಿಸಿದರು.ಮಂತ್ರಾಕ್ಷತೆಯ ಕಲಶವನ್ನು ಸುಳ್ಯದ ರಾಮ ಭಜನಾ ಮಂದಿರದಲ್ಲಿ ಇರಿಸಿ ಪೂಜಿಸಲಾಗಿತ್ತು.