ನ್ಯೂಸ್ ನಾಟೌಟ್: ಗ್ರಾಮೀಣ ಭಾಗದ ಮಕ್ಕಳಲ್ಲಿ ಕನ್ನಡ ಕಲಿಕೆಯ ಆಸಕ್ತಿ ಬೆಳೆಸುವಂತೆ ಮಾಡಿ ಸುಳ್ಯದ ಹಸಿರ ಪರಿಸರದಲ್ಲಿ ವಿಭಿನ್ನ ಶೈಲಿಯಲ್ಲಿ ಶಿಕ್ಷಣ ದಾಸ್ಸೋಹವನ್ನೇ ಉಣ ಬಡಿಸುತ್ತಿರುವ ಡಾ. ಚಂದ್ರಶೇಖರ ದಾಮ್ಲೆಯವರ ಕೀರ್ತಿ ಮುಕುಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ.
ಹೌದು, ಪಠ್ಯ ಪೂರಕ ಶಿಕ್ಷಣದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ನಂಬರ್ 1 ಶ್ರೇಯಾಂಕ ಪಡೆದುಕೊಂಡಿದೆ. ‘ಎಜ್ಯುಕೇಶನ್ ಟುಡೇ’ ಸಂಸ್ಥೆ ಕೊಡಮಾಡಿದ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಬೆಂಗಳೂರಿನ ಪ್ರತಿಷ್ಠಿತ ಪಂಚತಾರಾ ಹೋಟೆಲ್ ವೊಂದರಲ್ಲಿ ಸ್ವೀಕರಿಸಿದರು. ದೇಶದ ವಿವಿಧ CBSE, ICSE ಹಾಗೂ ಸ್ಟೇಟ್ ಬೋರ್ಡ್ ಶಾಲೆಯ ಮುಖ್ಯಸ್ಥರು ಕೂಡ ಈ ಪ್ರಶಸ್ತಿಗಳನ್ನು ಕ್ರಮವಾಗಿ ಪಡೆದುಕೊಂಡಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ಹಲವು ಮೌಲ್ಯಯುತ ವಿಚಾರಗಳ ಬಗ್ಗೆ ವಿಚಾರ ಸಂಕೀರ್ಣಗಳು ನಡೆದವು.