ನ್ಯೂಸ್ ನಾಟೌಟ್ : ಶಾಲಾ ಪ್ರವಾಸದಲ್ಲಿ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್ ಫೋಟ್ ಶೂಟ್ ಮಾಡಿಸಿದ ಫೋಟೋ ಕಳೆದ ಎರಡು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಈ ಫೋಟೋ ನೋಡಿ ನೆಟ್ಟಿಗರು ಗರಂ ಆಗಿದ್ದರು.ಎಂಥ ಕಾಲ ಬಂತಪ್ಪ.. ಗುರು- ಶಿಷ್ಯರ ಸಂಬಂಧದ ಮರ್ಯಾದೆಯನ್ನೇ ಕಳೆಯುತ್ತಿದ್ದಾರಲ್ಲ ಎಂದು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ವಿವಿಧ ಭಂಗಿಗಳಲ್ಲಿ ಪೋಟೋ ತೆಗೆದುಕೊಂಡು ಶಿಕ್ಷಕರ ನಡುವಳಿಕೆಗಳಿಗೆ ವಿರುದ್ದವಾಗಿ ನಡೆದುಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕಿಯನ್ನು ಸೇವೆಯಿಂದ ಅನುಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮದ ಶಾಲೆಯಿಂದ ಕೈಗೊಂಡಿದ್ದ ಶೈಕ್ಷಣಿಕ ಪ್ರವಾಸದ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕನೊಂದಿಗೆ ತೋಟಗಳ ಮಧ್ಯೆ ಪರಸ್ಪರ ಚುಂಬಿಸುವ ಪೋಟೋಗಳನ್ನು ಮೊಬೈಲ್ ಮೂಲಕ ಸೆರೆ ಹಿಡಿದುಕೊಂಡಿದ್ದರು. ಅವು ಶಿಕ್ಷಕಿಯ ಮೊಬೈಲ್ನಿಂದ ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಶಿಕ್ಷಕಿ ವಿರುದ್ದ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೇ ಶಾಲೆಗೆ ಚಿಂತಾಮಣಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಭೇಟಿ ನೀಡಿ ಪ್ರವಾಸಕ್ಕೆ ತೆರಳಿದ್ದ ಶಾಲಾ ಸಹ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಹಾಗೂ ಅಡುಗೆ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಆದರೆ ಅವರು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿಕೆ ನೀಡಿದ್ದರು. ಬಿಇಒ ಶಿಫಾರಸ್ಸಿನಂತೆ ಶಾಲಾ ಶಿಕ್ಷಣ ಇಲಾಖೆ ಜಿಲ್ಲೆಯ ಉಪ ನಿರ್ದೇಶಕರಾದ ಪಿ.ಬೈಲಾಂಜನಪ್ಪ, ಇಲಾಖೆ ವಿಚಾರಣೆಗೆ ಕಾಯ್ದರಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.