ನ್ಯೂಸ್ ನಾಟೌಟ್ :ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಗುತ್ತಿಗಾರು ಸಮಿತಿಯಿಂದ 16 ರಂದು ನಡೆಯಲಿರುವ ಬೃಹತ್ ಪ್ರತಿಭಟನೆ ಕಾರ್ಯಕ್ರಮದ ಬ್ಯಾನರ್ ತೆರವುಗೊಳಿಸುವಂತೆ ತಾಲೂಕು ಕಾರ್ಯನಿರ್ವಾಹಣಧಿಕಾರಿಗಳಿಗೆ ಹಿತರಕ್ಷಣಾ ವೇದಿಕೆಯಿಂದ ಮನವಿ ಮಾಡಿರುವುದನ್ನು ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ಸುಳ್ಯ ತಾಲೂಕು ಸಂಯೋಜಕ ಎನ್.ಟಿ ವಸಂತ್ ಖಂಡಿಸಿದ್ದಾರೆ.
12 ವರ್ಷಗಳ ಹಿಂದೆ ನಡೆದ ಸೌಜನ್ಯ ಪ್ರಕರಣದ ವಿಚಾರವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ನಾವು ಹೋರಾಟ ಮಾಡುತ್ತಾಬಂದಿದ್ದು,ಜನ ಸಾಮಾನ್ಯರು ಪಕ್ಷಾತೀತ,ಜಾತ್ಯತೀತವಾಗಿ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ.ಒಬ್ಬ ಹೆಣ್ಣು ಮಗಳ ನ್ಯಾಯಕ್ಕಾಗಿ 12 ವರ್ಷಗಳಿಂದ ಮಹೇಶ್ ಶೆಟ್ಟಿರವರು ಹೋರಾಟ ಮಾಡುತ್ತಾ ಬಂದಿದ್ದಾರೆ.ಇದೀಗ ಗುತ್ತಿಗಾರುವಿನಲ್ಲಿ ನಡೆಯುವ ಪ್ರತಿಭಟನೆ ಹತ್ತಿಕ್ಕುವ ದೃಷ್ಟಿಯಿಂದ ಕೆಲವು ಸ್ಥಾಪಿತ ಹಿತಾಸಕ್ತಿ ಗಳು ಬ್ಯಾನರ್ ತೆರವುಗೊಳಿಸುವಂತೆ ಒತ್ತಾಯ ಮಾಡುತ್ತಿವೆ.
ಕಾನೂನು ನಿಯಮನುಸಾರ ಬ್ಯಾನರ್ ಅಳವಡಿಸಿದ್ದು, ಏಕಾಏಕಿ ತೆರವು ಮಾಡುವಂತೆ ಒತ್ತಾಯ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಆ ರೀತಿ ಏನಾದರೂ ನಡೆದ್ರೆ ಸೌಜನ್ಯ ಹೋರಾಟ ಸಮಿತಿ ಖಂಡಿತವಾಗಿ ಸಹಿಸುವುದಿಲ್ಲ, ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಲ್ಲಿ ತಾಲೂಕು ಕಚೇರಿ ಮುಂದೆ ಧರಣಿ ನಡೆಸಲಾಗುವುದು.ಗುತ್ತಿಗಾರುವಿನಲ್ಲಿ ನಾಡಿದ್ದು ಸಜ್ಜನ ಶಕ್ತಿಗಳು ನಿಮ್ಮ ಈ ದಬ್ಬಾಳಿಕೆಗೆ ಖಂಡಿತ ಉತ್ತರ ನೀಡಲಿದೆ. ತಾಳ್ಮೆಯನ್ನು ಕೆದಕುವ ಪ್ರಯತ್ನ ಮಾಡಬೇಡಿ ಎಂದು ತಾಲೂಕು ಸೌಜನ್ಯ ಪರ ಹೋರಾಟ ಸಮಿತಿ ಸಂಯೋಜಕ ಎನ್.ಟಿ. ವಸಂತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.