ನ್ಯೂಸ್ ನಾಟೌಟ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ). ಶಾಂತಿಗ್ರಾಮ ಹಾಸನ ಜಿಲ್ಲೆ ಇದರ ವತಿಯಿಂದ ಯೋಜನೆಯ ಸಂಪೂರ್ಣ ಸುರಕ್ಷಾ – ಆರೋಗ್ಯರಕ್ಷಾ ಕಾರ್ಯಕ್ರಮದಡಿಯಲ್ಲಿ ಮಂಜೂರಾದ 88,400/- ರೂಪಾಯಿಯನ್ನು ತಾಲೂಕಿನ ಅರ್ಹ ಫಲಾನುಭವಿಗಳಿಗೆ ತಾಲೂಕು ಯೋಜನಾಧಿಕಾರಿ ನವೀನ್ ಎಂ. ವಿತರಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ವರ್ಷದಲ್ಲಿ ಶಾಂತಿಗ್ರಾಮ ಯೋಜನಾ ವ್ಯಾಪ್ತಿಯಲ್ಲಿ 84 ಫಲಾನುಭವಿಗಳಿಗೆ ರೂ.951000/- ಮೊತ್ತದ ಸಂಪೂರ್ಣ ಸುರಕ್ಷಾ – ಆರೋಗ್ಯ ರಕ್ಷಾ ಸೌಲಭ್ಯ ವಿತರಿಸಿರುವುದಾಗಿ ತಿಳಿಸಿದರು. ಈ ಸಂದರ್ಭ ಕಚೇರಿ ಪ್ರಬಂಧಕರಾದ ಶಿಲ್ಪಾ ನವೀನ್ ನಾಯ್ಕ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳಾದ ಚಂದನ ಎಸ್.ವಿ, ವಿಮಲ, ಮಂಜುಳ, ದೇವರಾಜ ಎಚ್, ಸುಮ ಮತ್ತು ಪುಟ್ಟಮ್ಮ ಮೊದಲಾದವರು ಉಪಸ್ಥಿತರಿದ್ದರು.