- +91 73497 60202
- [email protected]
- November 22, 2024 9:07 AM
ಮುಸ್ಲಿಂ, ಕ್ರೈಸ್ತರಿಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಶೋಷಣೆ ನಡೆಯಿತಾ..? ಪ್ರಮೋದ್ ಮುತಾಲಿಕ್ ಆರೋಪವೇನು?
ನ್ಯೂಸ್ ನಾಟೌಟ್ : ಮುಸ್ಲಿಂ, ಕ್ರೈಸ್ತ ಸಮುದಾಯಗಳಿಂದ ಕೇರಳದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಶೋಷಣೆಯಾಗುತ್ತಿದೆ ಎಂದು ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಡಿ.೩೦ ರಂದು ಗಂಭೀರ ಆರೋಪ ಮಾಡಿದ್ದಾರೆ. ಮುಸ್ಲಿಂ, ಕ್ರೈಸ್ತ ಸಮುದಾಯಗಳಿಂದ ಕೇರಳದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಮೇಲೆ ಶೋಷಣೆಯಾಗುತ್ತಿದೆ. ದಕ್ಷಿಣ ಭಾರತದಲ್ಲಿ ತಿರುಪತಿ ತಿಮ್ಮಪ್ಪನಷ್ಟೇ ಪ್ರಖ್ಯಾತಿ ಪಡೆದಿರುವ ಅಯ್ಯಪ್ಪ ದೇವಸ್ಥಾನವೂ ಇದೆ. ಆರು ರಾಜ್ಯಗಳಿಂದ ಐದು ಕೋಟಿ ಜನರು ಅಲ್ಲಿ ಭೇಟಿ ನೀಡುತ್ತಾರೆ. ಮೂರು ಸಾವಿರ ಕೋಟಿ ರೂ.ಗಿಂತಲೂ ಜಾಸ್ತಿ ಆದಾಯ ಬರುತ್ತದೆ. ಪಾರ್ಕಿಂಗ್ ಒಂದು ಕೋಟಿ ವಾಹನಗಳಾಗುತ್ತವೆ. ಒಂದು ವೆಹಿಕಲ್‌ಗೆ ನಲವತ್ತು ರೂಪಾಯಿ ತೆಗೆದುಕೊಳ್ತಾರೆ. ಎಲ್ಲ ಮೂಲಗಳಿಂದ ಮೂರು ಸಾವಿರ ಕೋಟಿಗಿಂತಲೂ ಅಧಿಕವಾಗುತ್ತದೆ. ಕೇರಳದಲ್ಲಿರುವ ಸರ್ಕಾರ ನಾಸ್ತಿಕ ಸರ್ಕಾರ. ದೇವರನ್ನು ನಂಬದಂತಹ ಸರ್ಕಾರ ಐದು ಕೋಟಿ ಆದರೆ, ಭಕ್ತರಿಗೆ ಅನುಕೂಲವಾಗುವಂತಹ ಸೌಕರ್ಯ ಒದಗಿಸಿಕೊಡುತ್ತಿಲ್ಲ. ಕೇರಳ ಸರ್ಕಾರ ದೇವಸ್ಥಾನದ ಆದಾಯವನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ದೇವಸ್ಥಾನ ಮಂಡಳಿಯನ್ನು ಕೇರಳ ಸರ್ಕಾರ ಹೆದರಿಸುವ ಕೆಲಸ ಮಾಡ್ತಿದೆ. ಇಷ್ಟೆಲ್ಲಾ ತೊಂದರೆ ಅನುಭವಿಸುತ್ತಿರುವ ಅಯ್ಯಪ್ಪ ಮಾಲಾಧಾರಿಗಳ ನೆರವಿಗೆ ಕರ್ನಾಟಕ ಸರ್ಕಾರ ನಿಲ್ಲಬೇಕಾಗಿದೆ. ಕರ್ನಾಟಕ ಸರ್ಕಾರ ಕೇರಳದ ಸರ್ಕಾರದೊಂದಿಗೆ ಮಾತನಾಡಿ ಮೂಲಭೂತ ವ್ಯವಸ್ಥೆ ಒದಗಿಸಿಕೊಡಬೇಕು. ಸಾವಿರಾರು ಕೋಟಿ ಆದಾಯದ ಸಂಪೂರ್ಣ ಹಣ ಭಕ್ತಾದಿಗಳ ಅನುಕೂಲಕ್ಕಾಗಿ ಉಪಯೋಗಿಸಬೇಕು. ಅನ್ನ ವಿತರಣೆ ಕಾರ್ಯಕ್ರಮ ಈ ಹಿಂದೆ ಇದ್ದಂತೆ ಜರುಗಬೇಕು ಎಂದು ಒತ್ತಾಯಿಸಿದ್ದಾರೆ.ಹಿಂದೂ ಸಂಘಟನೆಗಳು ಅನ್ನದಾನವನ್ನು ಉಚಿತವಾಗಿ ಮಾಡುತ್ತಿದ್ದವು. ಆದರೆ ಕೇರಳ ಸರ್ಕಾರದಿಂದ ಅದನ್ನು ಬ್ಯಾನ್ ಮಾಡಿ, ಪೊಲೀಸ್ ವ್ಯವಸ್ಥೆಗೆ ನೀಡಲಾಗಿದೆ. ಇದರಿಂದಾಗಿ ಅನೇಕ ಭಕ್ತಾದಿಗಳಿಗೆ ಅನ್ನ ಸಿಗ್ತಾ ಇಲ್ಲ. ಭಕ್ತಾದಿಗಳಿಗೆ ನೀರಿನ ವ್ಯವಸ್ಥೆ ಹಾಗೂ ಸ್ನಾನ ಮಾಡುವ ವ್ಯವಸ್ಥೆ ಮಾಡಬೇಕಾಗಿದೆ. ಮೊದಲಿದ್ದ ಮಾದರಿಯಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ