ನ್ಯೂಸ್ ನಾಟೌಟ್: ಕೆಲವು ವರ್ಷಗಳ ಹಿಂದೆ ಅಕ್ಷರ ಕಲಿಯುವ ಸಲುವಾಗಿ ಅಧ್ಯಾಪಕರು ಮಕ್ಕಳಿಗೆ ಶಾಲೆಯಲ್ಲಿ ಒಂದೆರಡು ಪೆಟ್ಟು ಕೊಡುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಅಧ್ಯಾಪಕರು ಹೊಡೆಯಲೇಬಾರದು ಅನ್ನುವ ನಿಯಮವಿದೆ. ಆದರೆ ಇಲ್ಲೊಬ್ಬ ಬಾಲಕನಿಗೆ ಸಣ್ಣ ದೊಣ್ಣೆ ಮತ್ತು ಕೈಯಿಂದ ಹೊಡೆದಿದ್ದಾರೆ ಅನ್ನುವ ದೂರು ದಾಖಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಶಾಲಾ ಶಿಕ್ಷಕರಾದ ಪ್ರಮೀಳಾ ಮತ್ತು ರಮೇಶ್ ಎಂಬವರು ಬಾಲಕನಿಗೆ ಹೊಡೆಯಲು ಪ್ರೇರೇಪಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪುಂಜಾಲಕಟ್ಟೆಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದಾರೆ. ಅವರು ಸಕಲ್ ಅನ್ನು ಮಾರಾಟ ಮಾಡಿರುವ ಬಗ್ಗೆ ವಿಚಾರಣೆ ನ.೨೮ರಂದು ನಡೆದಿತ್ತು. ಈ ವೇಳೆ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪರಮೇಶ್ ಅನ್ನುವವರು ಬಾಲಕನನ್ನು ವಿಚಾರಿಸಿ ತಾಯಿ ಸಮ್ಮುಖದಲ್ಲಿ ಸಣ್ಣ ದೊಣ್ಣೆ ಹಾಗೂ ಕೈಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಶಾಲಾ ಶಿಕ್ಷಕರಾದ ಪ್ರಮೀಳಾ ಮತ್ತು ರಮೇಶ್ ಎಂಬವರು ಬಾಲಕನಿಗೆ ಹೊಡೆಯಲು ಪ್ರೇರೇಪಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಈ ವಿಚಾರವನ್ನು ಹೊರಗೆ ತಿಳಿಸಿದರೆ ಸೈಕಲ್ ಕದ್ದು ಮಾರಾಟ ಮಾಡಿದ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನ.30ರಂದು ಬೆಳಗ್ಗೆ ಬಾಲಕನಿಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಬಾಲಕ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಕಲಂ: 323,324,506,114 ಜೊತೆಗೆ 34 ಐಪಿಸಿ ಮತ್ತು ಕಲಂ:75 ಬಾಲನ್ಯಾಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.