ನ್ಯೂಸ್ ನಾಟೌಟ್ : ಪೋಷಕರು ಸ್ಕೂಲ್ ಬಸ್ ಶುಲ್ಕವನ್ನು ಪಾವತಿಸಿಲ್ಲವೆಂದು ಶಾಲೆಯಲ್ಲಿಯೇ ಮಕ್ಕಳನ್ನು ಬಿಟ್ಟು ಬಂದಿರುವ ಘಟನೆಯೊಂದು ವರದಿಯಾಗಿತ್ತು.ಇದೀಗ ಶಾಲೆಯ ಡೊನೇಷನ್ ಶುಲ್ಕ (Examination Fees) ಪಾವತಿಸದ್ದಕ್ಕೆ ಮಕ್ಕಳನ್ನು ವಿದ್ಯಾರ್ಥಿಗಳಿಗೆ (Students) ಪರೀಕ್ಷೆ ಬರೆಯಲು ನಿರಾಕರಿಸಿದ ಘಟನೆ ನಡೆದಿದೆ. ಮಾತ್ರವಲ್ಲ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಬಳಿ ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷೆ ನೀಡಿದ ಘಟನೆ ನಡೆದಿದೆ.
ಈ ಘಟನೆ ವರದಿಯಾಗಿದ್ದು, ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar) ನಗರದ ಸರ್ಕಾರಿ ಅನುದಾನಿತ ಶಾಲೆಯೊಂದರಲ್ಲಿ.ಈ ಶಾಲೆಯ ಮಕ್ಕಳಿಗೆ ಪರೀಕ್ಷೆ ನಿರಾಕರಿಸಿದ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದು ಫಾರ್ಮೆಟಿವ್ ಅಸೈನ್ಮೆಂಟ್ ಎಂಬ ಪರೀಕ್ಷೆ ಬರೆಯಲು 6, 7 ಮತ್ತು 8ನೇ ತರಗತಿಯ ಶುಲ್ಕ ಪಾವತಿಸದ ಮಕ್ಕಳಿಗೆ ನಿರಾಕರಣೆ ಮಾಡಿ ಶಿಕ್ಷೆ (Punishment) ನೀಡಲಾಗಿದೆ ಎನ್ನಲಾಗಿದೆ.
ಪ್ರತಿ ಮಕ್ಕಳಿಗೆ ವರ್ಷಕ್ಕೆ 20 ಸಾವಿರ ಡೊನೇಷನ್ ಅನ್ನು ಶಾಲಾ ಆಡಳಿತ ಮಂಡಳಿಯು ಪೋಷಕರಿಂದ ಸಂಗ್ರಹಿಸುತ್ತದೆ. ಹಲವು ಜನ ಕಂತಿನ ಮೂಲಕ ನೀಡುವುದರಿಂದ ಕೆಲವು ಪೋಷಕರು ಸಂಪೂರ್ಣ ಹಣ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ 6, 7, 8ನೇ ತರಗತಿಯ ಶುಲ್ಕ ಭರಿಸದ ಮಕ್ಕಳಿಗೆ ಪರೀಕ್ಷೆ ನಿರಾಕರಣೆ ಮಾಡಿ ದೌರ್ಜನ್ಯ ಎಸಗಲಾಗಿದೆ.