ನ್ಯೂಸ್ ನಾಟೌಟ್ : ಈ ಹಿಂದೆಯೂ ಹಲವಾರು ಬಾರಿ ಮೋದಿ ನಂ.೧ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಇದೀಗ ಮತ್ತೊಮ್ಮೆಜನಪ್ರಿಯತೆಯಲ್ಲಿ ಟ್ವಿಟರ್ ಹಾಗೂ ಫೇಸ್ ಬುಕ್ ಫಾಲೋವರ್ ಗಳಲ್ಲಿ ವಿಶ್ವದ ಎಲ್ಲಾ ಗಣ್ಯಾತಿಗಣ್ಯರನ್ನೂ ಪ್ರಧಾನಿ ಮೋದಿ ಹಿಂದಿಕ್ಕಿದ್ದಾರೆ.ಹೌದು, ಯುಟ್ಯೂಬ್ ವಾಹಿನಿಯ ಸಬ್ ಸ್ಕ್ರೈಬರ್ಸ್ ಸಂಖ್ಯೆ 20 ಮಿಲಿಯನ್ ಗೆ (2 ಕೋಟಿ) ಏರಿದ್ದು, ಈ ಮೂಲಕ ಮೋದಿಯವರು ಇಷ್ಟು ಅಗಾಧ ಸಂಖ್ಯೆ ಯುಟ್ಯೂಬ್ ಸಬ್ ಸ್ಕ್ರೈಬರ್ ಗಳನ್ನು ಹೊಂದಿದ ವಿಶ್ವದ ನಂ. 1 ನಾಯಕರಾಗಿ ಹೊರಹೊಮ್ಮಿದ್ದಾರೆ..!
ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಅನೇಕ ಜಾಗತಿಕ ನಾಯಕರನ್ನು ಮೋದಿ ಹಿಂದಿಕ್ಕಿದ್ದಾರೆ ಎಂದು ಮೂಲಗಳು ತಿಳಿಸಿವೆ.The Narendra Modi Channel ಎಂಬ ಚಾನೆಲ್ ನಲ್ಲಿ ಹಲವಾರು ವೈವಿಧ್ಯಮಯ ಕಂಟೆಂಟ್ ಗಳು ಪೋಸ್ಟ್ ಆಗುತ್ತಿವೆ.ವಿಶೇಷವೆಂದರೆ ಅದು ಸಮಾಜದ ಅನೇಕ ವರ್ಗಗಳನ್ನು ತಲುಪುತ್ತಿದೆ. ಅದೇ ಕಾರಣಕ್ಕಾಗಿಯೇ ಅವರ ಸಬ್ ಸ್ಕ್ರೈಬರ್ ಗಳ ಸಂಖ್ಯೆ 2 ಕೋಟಿ ದಾಟಿದೆ..!
ಚಾನೆಲ್ ನಲ್ಲಿನ ಕಂಟೆಂಟ್ ಗಳು ಜನರನ್ನು ಆಕರ್ಷಿಸುತ್ತಿದ್ದು,ದಿನ ಬಂದು ಅವರ ಯೂಟ್ಯೂಬ್ ಚಾನೆಲ್ಗೆ ವಿಸಿಟ್ ಮಾಡುತ್ತಿದ್ದಾರೆ.ಮೋದಿಯವರ ಯುಟ್ಯೂಬ್ ವಾಹಿನಿಗೆ 2 ಕೋಟಿ ಸಬ್ ಸ್ಕ್ರೈಬರ್ ಗಳು ಬಂದಿರುವುದು ಮೋದಿಯವರು ಜನಸಾಮಾನ್ಯರ ಮೇಲೆ ಮೂಡಿಸಿರುವ ಪ್ರಭಾವದ ಹೆಗ್ಗುರುತು ಮಾತ್ರವಲ್ಲ, ಇದು ಯು ಟ್ಯೂಬ್ ನಂಥ ಡಿಜಿಟಲ್ ವೇದಿಕೆಗಳು ರಾಜಕೀಯ ನೇತಾರರನ್ನು ಮತ್ತಷ್ಟು ಜನರ ಹತ್ತಿರಕ್ಕೆ ಕೊಂಡೊಯ್ಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಯು ಟ್ಯೂಬ್ ಚಾನೆಲ್ ನ ಮುಖಪುಟ ತೆರೆದು ನೋಡಿದಾಗ ಅಲ್ಲಿ 23 ಸಾವಿರ ವಿಡಿಯೋ ಕಂಟೆಂಟ್ ಗಳು ಪೋಸ್ಟ್ ಆಗಿರುವುದನ್ನು ಗಮನಿಸಬಹುದಾಗಿದೆ. ಡಿ. 26ರಂದು ಭಾರತ್ ಮಂಟಪಮ್ ನಲ್ಲಿ ಪ್ರಧಾನಿಯವರು, ವೀರ್ ಬಾಲ್ ಗೌರವ (ಮಕ್ಕಳಿಗೆ ಶೌರ್ಯ ಪ್ರಶಸ್ತಿ) ಪ್ರದಾನ ಮಾಡಿರುವ ಕಾರ್ಯಕ್ರಮದ ವಿಡಿಯೋವನ್ನು ಹಾಕಲಾಗಿದೆ. ಈ ವಿಡಿಯೋ ಪೋಸ್ಟ್ ಆದ ಕೇವಲ 10 ಗಂಟೆಗಳಲ್ಲಿ 2 ಲಕ್ಷದ 16 ಸಾವಿರ ವ್ಯೂಸ್ ಗಳನ್ನು ಪಡೆದಿತ್ತು.