ನ್ಯೂಸ್ ನಾಟೌಟ್: ತಾಯಿ-ಮಗುವಿನ ಸಂಬಂಧಕ್ಕೆ ಬೆಲೆ ಕಟ್ಟಲಸಾಧ್ಯ.ಮಗುವಿಗೆ ಒಂಚೂರು ನೋವಾದರೂ ತಾಯಿ ಮನಸ್ಸು ಕರಗುತ್ತೆ.ಆದರೆ ಇಲ್ಲೊಂದು ಕಡೆ ಒಂದೂವರೆ ವರ್ಷದ ಏನು ಅರಿಯದ ಹೆಣ್ಣು ಮಗು ತನ್ನ ತಾಯಿ ಕಣ್ಣೀರು ಸುರಿಸುತ್ತಿರುವ ವೇಳೆ ಕಣ್ಣೀರು ಒರೆಸಿದೆ.ಹೌದು,ತನ್ನ ಮಗುವಿನ ಹೃದಯದಲ್ಲಿ ೨ ರಂಧ್ರಗಳಿದ್ದು, ಅದನ್ನು ಶಸ್ತ್ರ ಚಿಕಿತ್ಸೆ ಮಾಡಿಸೋದಕ್ಕೆ ಲಕ್ಷಾಂತರ ರೂ. ಖರ್ಚು ತಗಲುತ್ತೆ.ಹೀಗಾಗಿ ತನ್ನ ಕಂದನನ್ನು ಉಳಿಸಿಕೊಳ್ಳಲು ತಾಯಿ ಸಹಾಯ ಬೇಡುತ್ತಾಳೆ.ಈ ವೇಳೆ ಕಂದಮ್ಮ ತನ್ನ ತಾಯಿಯನ್ನೇ ಸಂತೈಸಿದ ಘಟನೆಯೊಂದು ಮನಕಲಕುವಂತಿತ್ತು.
ಈ ಘಟನೆ ಬೆಳಕಿಗೆ ಬಂದಿದ್ದು ದಾವಣಗೆರೆ ನಗರದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮನೆಯಲ್ಲಿ.ದಾವಣಗೆರೆ ನಗರದ ಶೆಖರಪ್ಪ ಬಡಾವಣೆಯ ನಿವಾಸಿ ಮೀನಾಕ್ಷಿ ಎಂಬುವವರು ಸಹಾಯವನ್ನು ಅರಸುತ್ತಾ ಸಚಿವರ ಮನೆಗೆ ಬಂದಿದ್ದಾರೆ.ಈ ವೇಳೆ ಸಚಿವರ ಪತ್ನಿ ಅವರನ್ನು ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿಸಿದ್ದಾರೆ.ಆಗ ತನ್ನ ಮಗುವಿಗಿರುವ ಸಮಸ್ಯೆ ಬಗ್ಗೆ ಹೇಳಿ ಕೊಂಡಿದ್ದಾರೆ.ಕಣ್ಣೀರು ಹಾಕುತ್ತಲೇ ಕಷ್ಟಗಳನ್ನು ಹೇಳಿಕೊಳ್ಳುತ್ತಿರುವಾಗ ತಾಯಿಗೆ ದುಖಃ ಉಮ್ಮಳಿಸಿ ಬಂದಿದೆ.
ಇದೇ ಸಂದರ್ಭದಲ್ಲಿ ಅಮ್ಮನ ಕಣ್ಣೀರನ್ನ ನೋಡುತ್ತಾ ಇದ್ದ ಹೆಣ್ಣು ಮಗುವೊಂದು ಅಳಬೇಡ ಅಮ್ಮ ಎಂದು ಒರೆಸಿದೆ.ಮೀನಾಕ್ಷಿ ಅವರ ಸಮಸ್ಯೆ ಆಲಿಸಿದ ಪ್ರಭಾ ಮಲ್ಲಿಕಾರ್ಜುನ್ , ಆಪರೇಷನ್ ಮಾಡಿಸುವ ಭರವಸೆಯನ್ನು ನೀಡಿದ್ದಾರೆ. ಮೀನಾಕ್ಷಿಯವರ ಬಳಿ ಪಡಿತರ ಚೀಟಿ ಇಲ್ಲದಿರೋ ಕಾರಣ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಭರವಸೆ ನೀಡಿರುವ ಪ್ರಭಾ ಮಲ್ಲಿಕಾರ್ಜುನ್ , ಮಹಿಳೆಯ ಸಂಪೂರ್ಣ ಮಾಹಿತಿ ಪಡೆದು ಕಳುಹಿಸಿದ್ದಾರೆ.