ನ್ಯೂಸ್ ನಾಟೌಟ್ : ಒಂಟಿಯಾಗಿದ್ದ ವೃದ್ದೆ ಪೇಪರ್ ನಲ್ಲಿ ನೋಡಿದ ವಧು-ವರರು ಬೇಕಾಗಿದ್ದಾರೆ ಜಾಹಿರಾತು ನೋಡಿ ಮೋಸ ಹೋಗಿದ್ದಾರೆ.ಅವರು ಅಂದುಕೊಂಡಂತೆ ವೃದ್ದನ ಪರಿಚಯವೇನೋ ಆಯ್ತು..ಆದ್ರೆ ವೃದ್ದ ಮಹಾಮೋಸ ಮಾಡಿದ್ದಾನೆ ಎಂದು ವೃದ್ದೆ ಠಾಣೆ ಮೆಟ್ಟಿಲೇರಿದ ಘಟನೆ ವರದಿಯಾಗಿದೆ.
8 ತಿಂಗಳ ಹಿಂದೆ ನಡೆದಿದ್ದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.55 ವರ್ಷದ ನಿರ್ಮಲಾ ಮಾಗೋಡಿ ಎಂಬ ವೃದ್ಧೆಗೆ 60 ವರ್ಷದ ಸಂತೋಷ ಎಮ್ ಎಂಬ ವೃದ್ಧನ ಪರಿಚಯವಾಗಿತ್ತು. 20 ದಿನಗಳ ಪರಿಚಯ ಸ್ನೇಹವಾಯ್ತು. ಕೊನೆಗೆ ಸ್ನೇಹ ಪ್ರೀತಿಗೆ ತಿರುಗಿತು. ಬಳಿಕ ಪ್ರೇಮ ಮದುವೆಯ ಮಾತುಕತೆಯ ತನಕ ಹೋಗಿತ್ತು. ಆದರೆ ಅಜ್ಜ ಮಾತ್ರ ನಂಬಿದ್ದ ಅಜ್ಜಿಗೆ ಮೋಸ ಮಾಡಿದ್ದಾನೆ.
ನಿರ್ಮಲಾ ಮಾಗೋಡಿ ಅಜ್ಜಿಗೆ ಎರಡನೇ ಮದುವೆಯಾಗಬೇಕೆಂಬ ಆಸೆಯಿತ್ತು. ಹೀಗಾಗಿ ಆಕೆಯ ಕುಟುಂಬದ ಜತೆಗೆ ಮಾತುಕತೆ ಕೂಡ ನಡೆಸಿದ್ದರು. ಕೊನೆಗೆ ವೃದ್ಧೆ ಸಂತೋಷಗೆ ಕರೆ ಮಾಡುತ್ತಾಳೆ. ಆದರೆ ಅಜ್ಜ ಮಾಡಿದ್ದೇನು ಗೊತ್ತಾ? ಇದು ಸರಿಯಾದ ಸಮಯವೆಂದು ಹಾವೇರಿಯ ಹುಕ್ಕೇರಿ ಮಠಕ್ಕೆ ವೃದ್ಧೆಯನ್ನು ಕರೆಯಿಸಿಕೊಳ್ಳುತ್ತಾನೆ. ನಂತರ ಆಕೆಗೆ ಜ್ಯೂಸ್ ನಲ್ಲಿ ಮತ್ತು ಬರಿಸುವ ಮಾತ್ರೆ ಹಾಕಿ ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ 7 ತೊಲೆ ಬಂಗಾರ, 50 ಸಾವಿರ ಹಣ ದೋಚಿ ಎಸ್ಕೇಪ್ ಆಗಿದ್ದಾನೆ.
ಇದೀಗ ಮೋಸ ಹೋದ ವೃದ್ಧೆ ನಿರ್ಮಲಾ ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕ್ರೀಮಿನಲ್ ಸಂತೋಷ ಎಂಬ ವೃದ್ಧನ ವಿರುದ್ದ ದೂರು ನೀಡಿದ್ದಾರೆ. ಸದ್ಯ ಆರೋಪಿ ಪತ್ತೆಗಾಗಿ ಪೋಲಿಸರಿಂದ ಹುಡುಕಾಟ ನಡೆಯುತ್ತಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.