ನ್ಯೂಸ್ ನಾಟೌಟ್: ಇಲ್ಲೊಬ್ಬಳು ಯುವತಿ ತನಗಿಂತ 15 ವರ್ಷ ಹಿರಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾಳೆ. 20 ರಿಂದ 30 ವರ್ಷ ವಯಸ್ಸಿನ ಅಂತರದಲ್ಲಿ ಪ್ರೀತಿ ಹುಟ್ಟಿ ವಿವಾಹವಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದ್ರೆ ತನ್ನನ್ನು 4 ವರ್ಷದ ಬಾಲಕಿಯಿಂದಲೇ ಸಾಕಿದ ವ್ಯಕ್ತಿಯಲ್ಲೇ ಮದುವೆಯಾಗಿರುವುದು ಹಲವರಲ್ಲಿ ಚರ್ಚೆಗೆ ಕಾರಣವಾಗಿದೆ.
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಯುವತಿಯ ಹೆಸರು ಸಮಂತಾ ಗೀಸಾಲ್(29) ಎಂಬಾಕೆ 44 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಅದರ ನಡುವೆ 15 ವರ್ಷಗಳ ವಯಸ್ಸಿನ ಅಂತರವಿದೆ ಎನ್ನಲಾಗಿದೆ.
ಈ ವ್ಯಕ್ತಿ ಸಮಂತಾಳನ್ನು ಕೇವಲ ನಾಲ್ಕು ವರ್ಷದ ಮಗುವಾಗಿದ್ದಾಗಿನಿಂದ ಸಾಕುತ್ತಿದ್ದಾನೆ. ಇತ್ತೀಚೆಗಷ್ಟೇ ಸಮಂತಾ ತಾನು ಚಿಕ್ಕವಳಾಗಿದ್ದಾಗ ಮತ್ತು ಇತ್ತೀಚೆಗೆ ಮದುವೆಯಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾಳೆ. ಬಾಲ್ಯದ ಫೋಟೋದಲ್ಲಿ ಆಕೆಗೆ 4 ವರ್ಷ ಮತ್ತು ಆಕೆಯ ಪತಿಗೆ 19,ಮತ್ತು ಆತ ಸಮಂತಾಳನ್ನು ತನ್ನ ಮಡಿಲಲ್ಲಿ ಹೊತ್ತುಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.
ಎರಡನೇ ಫೋಟೋದಲ್ಲಿ ಅವರ ಮದುವೆಯ ಸಮಯದಲ್ಲಿ, ಸಮಂತಾಗೆ 29 ವರ್ಷ, ಪತಿಗೆ 44 ವರ್ಷವಿರುವುದನ್ನು ಇರಿಸಲಾಗಿದೆ.
ಈಗ ಇವರಿಬ್ಬರ ವಿಚಿತ್ರ ಸಂಬಂಧವನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. ಆತ ಪೋಷಕರ ಸ್ಥಾನದಲ್ಲಿ ಆಕೆಯನ್ನೇ ಮದುವೆಯಾಗಿರುವುದು ಸರಿಯಲ್ಲ ಎಂದು ಹಲವರು ತಿಳಿಸಿದ್ದಾರೆ.
Follow us for more updates:
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209
Koo app: https://www.kooapp.com/profile/NewsNotOut
Website : https://newsnotout.com/