ನ್ಯೂಸ್ ನಾಟೌಟ್: ಕಾಸರಗೋಡು ಜಿಲ್ಲೆಯ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರಕ್ಕೆ ನೂತನ ಧ್ವಜಸ್ತಂಭದ ಮರವನ್ನು ಕುಣಿತ ಭಜನೆ, ಚೆಂಡೆವಾದನಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಕರೆತರಲಾಯಿತು.
ಬ್ರಹ್ಮಶ್ರೀ ವೇದಮೂರ್ತಿ ದೇಲಂಪಾಡಿ ಗಣೇಶ ತಂತ್ರಿಯವರ ಮಾರ್ಗದರ್ಶನದಲ್ಲಿ ಈಶ್ವರಮಂಗಲ ಸಮೀಪದ ಪುಂಡಿಕಾಯಿಯಿಂದ ಪ್ರಾರ್ಥನೆ ಸಲ್ಲಿಸಿ ಮರವನ್ನು ಕಡಿದು ನಟ್ಟಣಿಗೆ, ಕಿನ್ನಿಂಗಾರು, ಏತಡ್ಕ ಮಾರ್ಗವಾಗಿ ಚೆಂಡೆ ವಾದ್ಯಘೋಷದೊಂದಿಗೆ ನಾರಂಪಾಡಿ ಕ್ಷೇತ್ರಕ್ಕೆ ತರಲಾಯಿತು. ಈ ಸಂದರ್ಭ ಕೊಡಿಮರ ಮೆರವಣಿಗೆಗೆ ನೇತೃತ್ವ ವಹಿಸಿದ್ದ ಸುಬ್ರಹ್ಮಣ್ಯ ಭಟ್ ತಲೇಕ, ಹರೀಶ್ ನಾರಂಪಾಡಿ, ಗೋಪಾಲಕೃಷ್ಣ ಮುಂಡೊಳುಮೂಲೆ, ದೇವರಾಜ್ ರೈ ನಾರಂಪಾಡಿ, ಕುಂಞಿರಾಮ, ಬಾಲಕೃಷ್ಣ ಮಾಸ್ಟರ್ ನಾರಂಪಾಡಿ, ಬಾಲಕೃಷ್ಣ ಮಣಿಯಾನಿ ಮತ್ತಿತರರಿದ್ದರು.