ನ್ಯೂಸ್ ನಾಟೌಟ್ : ಹೊಸ ವರ್ಷ ಸಂಭ್ರಮಕ್ಕೆ ಕಾಲಿಡಲು ಸಜ್ಜಾಗುತ್ತಿದ್ದೇವೆ.ಹೀಗಾಗಿ ಇಡೀ ದೇಶವೇ ಹೊಸ ವರ್ಷವನ್ನು ಸ್ವಾಗತ ಮಾಡಲು ರೆಡಿಯಾಗುತ್ತಿದೆ.ಅದರಲ್ಲೂ ನ್ಯೂ ಇಯರ್ಗಾಗಿ ಹಲವಾರು ಮಂದಿ ನಾನಾ ರೀತಿಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.ವಿಶೇಷವಾಗಿ ಪ್ರವಾಸಿ ತಾಣಗಳನ್ನು ಭೇಟಿಯಾಗಲು ಹೆಚ್ಚು ಜನ ಇಷ್ಟ ಪಡುತ್ತಾರೆ.ಇದೀಗ ೨೦೨೩ ಈ ಹೊತ್ತಿನಲ್ಲಿ ಗೂಗಲ್ (Google Search) ತನ್ನ ಚಟುವಟಿಕೆಗಳ ಮಾಹಿತಿಯನ್ನ ಬಿಡುಗಡೆ ಮಾಡಿದೆ. ಈ ವರ್ಷ ಗೂಗಲ್ನಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಿದ ಪ್ರವಾಸಿ ತಾಣಗಳ ಪಟ್ಟಿಯನ್ನು ಗೂಗಲ್ ಇಂಡಿಯಾ (Google India) ಇಯರ್ ಇನ್ ಸರ್ಚ್ (Year In Search) ಹೆಸರಿನಲ್ಲಿ ಬಿಡುಗಡೆ ಮಾಡಿದೆ.
ಇದರಲ್ಲಿ ಕನ್ನಡಿಗರು ಖುಷಿ ಪಡುವ ವಿಚಾರವಿದೆ.ವಿಶೇಷವಾಗಿ ಕೊಡಗಿನವರು ಈ ಬಗ್ಗೆ ಅತೀ ಹೆಚ್ಚು ಸಂತೋಷ ಪಡಬೇಕು.ಯಾಕೆಂದರೆ ಏನೆಂದರೆ, ಈ ಟಾಪ್ 10 ಪಟ್ಟಿಯಲ್ಲಿ ಕೊಡಗು(Kodagu) 7ನೇ ಸ್ಥಾನದಲ್ಲಿದೆ.ಅಂದರೆ, ದೇಶದ ಬಹುತೇಕ ಜನರು ತಮ್ಮ ನೆಚ್ಚಿನ ಪ್ರವಾಸಿ ತಾಣ ಕೊಡಗು(Coorg) ಆಯ್ಕೆ ಮಾಡಿಕೊಂಡಿರುತ್ತಾರೆಂಬುದು ಇದರಿಂದ ಖಚಿತವಾಗುತ್ತದೆ.
ಈ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ವಿಯೆಟ್ನಾಮ್ ಇದೆ. ನಂತರದ ಸ್ಥಾನದಲ್ಲಿ ಗೋವಾ, ಇಂಡೋನೇಷ್ಯಾ ರಾಜಧಾನಿ ಬಾಲಿ, ಶ್ರೀಲಂಕಾ, ಥಾಯ್ಲೆಂಡ್, ಕಾಶ್ಮೀರ, ಕೊಡಗು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಇಟಲಿ, ಸ್ವಿಟ್ಜರ್ಲ್ಯಾಂಡ್ಗಳಿವೆ. ಈ ಟಾಪ್ 10 ಪಟ್ಟಿಯಲ್ಲಿ ಕೆಲವು ವೆಡ್ಡಿಂಗ್ ಡೆಸ್ಟಿನೇಷನ್ಸ್ ಆದರೆ ಮತ್ತೊಂದಿಷ್ಟು ಹನಿಮೂನ್ ತಾಣಗಳಿವೆ. ಇನ್ನೊಂದಿಷ್ಟು ರಜಾ ಮಜಾಕ್ಕಾಗಿ ಆಯ್ಕೆ ಮಾಡಲಾಗುವ ಪ್ರವಾಸಿ ತಾಣಗಳಾಗಿವೆ. ಎಲ್ಲಕ್ಕಿಂತ ಖುಷಿ ಎಂದರೆ, ಈ ಪಟ್ಟಿಯಲ್ಲಿ ಕನ್ನಡನಾಡಿನ ಕೊಡಗು ಕೂಡ ಇರೋದು.
2023ರಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಥಳಗಳು ಈ ಕೆಳಕಂಡಂತಿವೆ.
- ವಿಯೆಟ್ನಾಮ್
- ಗೋವಾ
- ಬಾಲಿ
- ಶ್ರೀಲಂಕಾ
- ಥಾಯ್ಲೆಂಡ್
- ಕಾಶ್ಮೀರ
- ಕೂರ್ಗ್(ಕೊಡಗು)
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
- ಇಟಲಿ
- ಸ್ವಿಟ್ಜರ್ಲ್ಯಾಂಡ್