ನ್ಯೂಸ್ ನಾಟೌಟ್ :ರಾಜ್ಯದಲ್ಲಿ ಮತ್ತೆ ಕೋವಿಡ್ ಹೆಚ್ಚಾಗುವ ಭೀತಿ ಎದುರಾಗಿದೆ. ಕೇರಳದಲ್ಲಿ ಇತ್ತೀಚೆಗೆ ಕೋವಿಡ್ ವೈರಸ್ನ (Covid Virus) ಹೊಸ ರೂಪಾಂತರಿಯಾದ COVID Subvariant JN.1 ಪ್ರಕರಣ ವರದಿಯಾಗಿದೆ. ಕೋವಿಡ್ -19 ರೂಪಾಂತರ ಜೆಎನ್. 1 ಈ ರಜಾ ಋತುವಿನಲ್ಲಿ ಹಲವು ದೇಶಗಳಲ್ಲಿ ಪ್ರಾರಂಭವಾಗಿದೆ. ಆದರೆ ಭಾರತದಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
“ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವುದರಲ್ಲಿ ಅಸಾಮಾನ್ಯವಾದುದೇನೂ ಇಲ್ಲ ಮತ್ತು ಯಾವುದೂ ಆತಂಕಕಾರಿಯಲ್ಲ. ಈ ಪ್ರಕರಣಗಳು ಹೆಚ್ಚಾಗಿ ಬಿಎ 2 (BA2) ಉಪ-ವಂಶಾವಳಿಯಾದ ಜೆಎನ್ .1 ರೂಪಾಂತರದಿಂದ ಹರಡುತ್ತಿದೆ” ಎಂದು ತಜ್ಞ ವೈದ್ಯರು ಹೇಳಿದ್ದಾರೆ. ವಂಶಾವಳಿ ಜೆಎನ್.1 ರೂಪಾಂತರಿ ಮೊದಲು ಲಕ್ಸಂಬರ್ಗ್ನಲ್ಲಿ ಕಂಡುಬಂದಿತ್ತು. ಇತ್ತೀಚಿನ ವರದಿಗಳ ಪ್ರಕಾರ ಇದು ಈಗ 38ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ.
ಕ್ರಿಸ್ಮಸ್ ಮತ್ತು ರಜಾ ಸಮಯವಾಗಿರುವುದರಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಚಾರ ಹೆಚ್ಚಾಗಿರುತ್ತದೆ. ಹೀಗಾಗಿ ರೋಗಕಾರಕಗಳು ಹೆಚ್ಚಾಗಿ ಈ ಸಮಯದಲ್ಲೇ ಗಡಿಗಳನ್ನು ದಾಟಿ ಹರಡುತ್ತವೆ. ಆದ್ದರಿಂದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಅಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಡಿಸೆಂಬರ್ 8ರಂದು ಕೇರಳದ ಕರಕುಳಂನಲ್ಲಿ ಭಾರತದ ಮೊದಲ ಜೆಎನ್ .1 ಪ್ರಕರಣ ಕಂಡು ಬಂದಿತ್ತು. 79 ವರ್ಷದ ಮಹಿಳೆಯಲ್ಲಿ ಜೆಎನ್ .1 ಗುರುತಿಸಲಾಗಿದೆ.