ನ್ಯೂಸ್ ನಾಟೌಟ್: ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಲಿದೆ.ಜನವರಿ 22 ರಂದು ಮುಹೂರ್ತ ಫಿಕ್ಸ್ ಆಗಿದ್ದು, ಎಲ್ಲರ ಚಿತ್ತ ಅಯೋಧ್ಯೆ ರಾಮ ಮಂದಿರದ ಮೇಲಿದೆ. ಹೀಗಾಗಿ ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇತ್ತ ರಾಮನ ಭಕ್ತಿಯಲ್ಲಿ ಮುಳುಗಿದ ಮುಸ್ಲಿಂ ಯುವತಿಯೊಬ್ಬಳು ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ರಾಮನ ಭಕ್ತಿಯಲ್ಲಿ ಮುಳುಗಿರುವ ಶಬ್ನಂ ಭುಜದ ಮೇಲೆ ಕೇಸರಿ ಧ್ವಜ, ಬೆನ್ನಿನಲ್ಲಿ ರಾಮ ಮಂದಿರದ ಫೋಟೋ ಮತ್ತು ತಲೆ ಮೇಲೆ ಹಿಜಾಬ್ ಧರಿಸಿರುವ ಈ ಯುವತಿ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ಮುಂಬೈನಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸುಮಾರು 1,500 ಕಿ.ಮೀ ದೂರ ಕ್ರಮಿಸಿ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಇಲ್ಲಿಯವರೆಗೆ ಶಬನಂ ಇನ್ನೂರೈವತ್ತು ಕಿಲೋಮೀಟರ್ ಕ್ರಮಿಸಿ ನಾಸಿಕ್ ತಲುಪಿದ್ದಾಳೆ. ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡುವುದಾಗಿ ಶಬನಂ ಹೇಳಿದ್ದಾರೆ.
ಶಬನಂಗೆ ರಾಮನನ್ನು ನೋಡುವ ಆಸೆಯಂತೆ. ಬಾಲ್ಯದಿಂದಲೂ ರಾಮಾಯಣದ ಅಭಿರುಚಿ ಇದ್ದು, ಆಕೆ ಸಂಪೂರ್ಣ ಮಹಾಭಾರತ ಧಾರಾವಾಹಿಯನ್ನು ವೀಕ್ಷಿಸಿದ್ದಾರೆ. ರಾಮಾಯಣ ಮತ್ತು ಮಹಾಭಾರತ ಅವಳ ಜೀವನದ ಮೇಲೆ ಬಹಳ ಪ್ರಭಾವ ಬೀರಿದವು. ಅವಳು ಶ್ರೀರಾಮನನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾಳೆ. ಆಕೆಯ ಕುಟುಂಬಸ್ಥರೂ ಆಕೆಯನ್ನು ಅಯೋಧ್ಯೆಗೆ ಹೋಗುವಂತೆ ಪ್ರೋತ್ಸಾಹಿಸಿದ್ದಾರೆ.ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ನಂತರ ಅಯೋಧ್ಯೆಯ ಧನಿಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಗೆ ತೆರಳಲಿದ್ದಾರೆ. ಈ ಮೂಲಕ ತನಗೆ ಎರಡೂ ಧರ್ಮಗಳಲ್ಲಿ ಆಸಕ್ತಿ ಇದೆ ಎಂಬ ಸಂದೇಶವನ್ನು ಸಾರಲು ಹೊರಟಿದ್ದಾಳೆ. ಆಕೆಯ ಭದ್ರತೆಗಾಗಿ ಮಹಾರಾಷ್ಟ್ರ ಸರ್ಕಾರ ಮೂವರು ಮಹಿಳಾ ಪೊಲೀಸರನ್ನು ನಿಯೋಜಿಸಿದೆ.
ತನಗೆ ರಾಮಾಯಣ ಮತ್ತು ಭಗವಾನ್ ಶ್ರೀರಾಮನಲ್ಲಿ ತುಂಬಾ ಆಸಕ್ತಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಅಯೋಧ್ಯೆಗೆ ಹೋಗಿ ಶ್ರೀರಾಮಚಂದ್ರನ ಕುರಿತು ಇನ್ನಷ್ಟು ತಿಳಿದುಕೊಳ್ಳುವುದು ತನ್ನ ಮಹತ್ವಾಕಾಂಕ್ಷೆಯಾಗಿದೆ ಎಂದು ಶಬನಮ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕೆಲಸದಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಶಬನಮ್ ಹೇಳಿದ್ದಾರೆ.