ಹಿಂದೂ ಧರ್ಮಕ್ಕೆ ಮತಾಂತರಗೊಂಡದ್ದೇಕೆ ಈ ಮುಸ್ಲಿಂ ಕುಟುಂಬ? ಈ ಘಟನೆ ನಡೆದದ್ದೆಲ್ಲಿ..? ಕುಟುಂಬದ ಮುಖ್ಯಸ್ಥ ಹೇಳಿದ್ದೇನು?

ನ್ಯೂಸ್ ನಾಟೌಟ್ : ಮುಸ್ಲಿಂ ಕುಟುಂಬವೊಂದು ವಿಂಧ್ಯಾಚಲದಲ್ಲಿ ಪೂಜೆ ಸಲ್ಲಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ. ಮುಸಲ್ಮಾನರಿಂದ ಹಿಂದೂವಾಗಿ ಮತಾಂತರಗೊಂಡ ಕುಟುಂಬದ ಮುಖ್ಯಸ್ಥರು ರಾಮಮಂದಿರ ದರ್ಶನಕ್ಕೆ ಅಯೋಧ್ಯೆಗೆ ಹೋಗುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಚೇಡಿ ಮತ್ತು ಅವನ ಕುಟುಂಬ, ಮುಸ್ಲಿಂ ಧರ್ಮದ ಕೆಳ ಸಮುದಾಯದಿಂದ ಬಂದವರು ಎನ್ನಲಾಗಿದ್ದು, ಬ್ಯಾಂಡ್ ನುಡಿಸುವುದರ ಜೊತೆಗೆ ಇತರ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಈ ಮಧ್ಯೆ ಚೇಡಿ (ಡಿ.೨೯) ಶುಕ್ರವಾರ ತನ್ನ ಕುಟುಂಬದ ಎಲ್ಲಾ ಒಂಬತ್ತು ಸದಸ್ಯರೊಂದಿಗೆ ಮಿರ್ಜಾಪುರದ ವಿಂಧ್ಯಾಚಲ ಧಾಮ್‌ಗೆ ತೆರಳಿದರು. ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ ಬಳಿಕ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಮೊದಲು ತಾನು ಮುಸ್ಲಿಮನಾಗಿದ್ದೆ ಮತ್ತು ನಮಾಜ್ ಕೂಡ ಮಾಡುತ್ತಿದೆ. ಆದರೆ ಈಗ ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ ಎಂದು ಕುಟುಂಬದ ಮುಖ್ಯಸ್ಥ ಚೇಡಿ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಆ ಕುಟುಂಬ ವಿಂಧ್ಯಾಚಲ ಧಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಯೋಧ್ಯೆಗೆ ಹೋಗುವ ಕುರಿತಾದ ಪ್ರಶ್ನೆಗೆ, ‘ಹೌದು ಹೋಗುತ್ತೇನೆ, ರಾಮಲಲ್ಲಾನನ್ನು ನೋಡಲು ಹೋಗುತ್ತೇನೆ’ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಚೇಡಿ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಮಾಹಿತಿ ತಿಳಿದ ಬಿಜೆಪಿ ಮುಖಂಡರು ಚೇಡಿಯವರ ಮನೆಗೆ ಆಗಮಿಸಿ ಇಡೀ ಕುಟುಂಬಕ್ಕೆ ಮಾಲಾರ್ಪಣೆ ಮಾಡಿ ಕೇಸರಿ ವಸ್ತ್ರ ತೊಡಿಸಿ ಗೌರವಿಸಿದ್ದಾರೆ ಎನ್ನಲಾಗಿದೆ.