ನ್ಯೂಸ್ ನಾಟೌಟ್ : ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಗೆ ಆದ ಅನುಭವ ನನಗೂ ಆಗಿದೆ. ನಾನೂ ಬಿಜೆಪಿಯಲ್ಲಿ ಇದ್ದು ಬಂದವನು ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಗುರುವಾರ (ಡಿ.೭) ಹೇಳಿಕೆ ನೀಡಿದ್ದಾರೆ.
ಆದ್ರೆ ಅಲ್ಲಿ ಆ ಜಾತಿ, ಈ ಜಾತಿ ಅಂತಾ ಹೇಳಲ್ಲ. ಹಾಗೇನಾದ್ರು ಹೇಳಿದ್ರೆ ಅದು ಖಂಡನೀಯವಾದದ್ದು ಎಂದು ಚಂದ್ರು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಜಾತಿ ಕಾರಣಕ್ಕೆ ನಾಗ್ಪುರದ ಆರ್ ಎಸ್ಎಸ್ ಕಚೇರಿಯಲ್ಲಿರುವ ಹೆಡಗೇವಾರ್ ಸ್ಮಾರಕದೊಳಗೆ ಬಿಡಲಿಲ್ಲ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದರು, ಈ ಬಗ್ಗೆ ಚಂದ್ರು ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ಹಲವು ಸಭೆಗಳಿಗೆ ಆಹ್ವಾನವೇ ನೀಡುತ್ತಿರಲಿಲ್ಲ. ನಿಖರ ಕಾರಣ ಹೇಳದೆ ದೂರುವಿಡುತ್ತಿದ್ದರು. ಆದರೆ ಗೂಳಿಹಟ್ಟಿ ಶೇಖರ್ ಹೇಳಿಕೆ ನಂತರ ಮನವರಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಮೋದಿಯವರು ಪರಿವಾರ ರಾಜಕಾರಣಕ್ಕೆ ನನ್ನ ಸಮ್ಮತಿ ಇಲ್ಲ ಅಂತಾರೆ. ಆದ್ರೆ ಯಡಿಯೂರಪ್ಪನವರು ರಾಷ್ಟ್ರೀಯ ಕಾರ್ಯಕಾರಣಿಯಲ್ಲಿದ್ದಾರೆ. ಅವರ ಓರ್ವ ಪುತ್ರ ಸಂಸದ, ಮತ್ತೋರ್ವ ಮಗ ರಾಜ್ಯಾಧ್ಯಕ್ಷರಾಗಿದ್ದಾರೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ದ್ದು ಕೂಡ ಇದೇ ಪರಿಸ್ಥಿತಿ. ದೇವೇಗೌಡ್ರ ಕುಟುಂಬವನ್ನು ನೋಡಿದ್ರೆ ಇದೆಲ್ಲ ಅರ್ಥವಾಗುತ್ತದೆ ಎಂದು ಬಿಜೆಪಿಯ ಕುಟುಂಬ ರಾಜಕಾರಣವನ್ನು ಮುಖ್ಯಮಂತ್ರಿ ಚಂದ್ರು ಟೀಕಿಸಿದರು ಎನ್ನಲಾಗಿದೆ.