ನ್ಯೂಸ್ ನಾಟೌಟ್ :ತಾಯಿ-ಮಗುವಿನ ಸಂಬಂಧಕ್ಕೆ ಬೆಲೆ ಕಟ್ಟಲಸಾಧ್ಯ.ಯಾಕೆಂದರೆ ತಾಯಿ ತನ್ನ ಮಕ್ಕಳ ಒಳಿತಿಗಾಗಿ ಎಂತಹ ತ್ಯಾಗ ಮಾಡೋದಕ್ಕೆ ಸಿದ್ಧವಾಗಿರುತ್ತಾಳೆ. ಅದರಲ್ಲೂ ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾಳೆ.ಸಂಜೆ ವೇಳೆ ಶಾಲೆಯಿಂದ ಬರುವುದಕ್ಕೆ ಸ್ವಲ್ಪ ತಡವಾದ್ರೂ ಆತಂಕ ಪಡುತ್ತಾಳೆ.ಆದರೆ ಇಲ್ಲೊಬ್ಬಳು ತಾಯಿ ಅದಕ್ಕೆ ತದ್ವಿರುದ್ಧ ಎಂಬಂತಿದ್ದು ತಾಯಿಯೇ ತನ್ನ ಮಗಳನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಪ್ರಕರಣ ಉತ್ತರಪ್ರದೇಶದ (Uttar Pradesh) ಗೋರಖ್ಪುರದ ಮಹೇಸ್ರಾ ಎಂಬಲ್ಲಿ ನಡೆದಿದ್ದು, ಹಣ ಕೊಟ್ಟು ಯುವತಿಯನ್ನು ಮದುವೆಯಾದ (Marriage) ಹರಿಯಾಣ (Haryana) ಮೂಲದ ವ್ಯಕ್ತಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವಂತೆ ಬಲವಂತಪಡಿಸಿ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.ಯುವತಿ ಈಗ ನ್ಯಾಯಕ್ಕಾಗಿ ಪೊಲೀಸ್ (Police) ಠಾಣೆಯ ಮೆಟ್ಟಿಲೇರಿದ್ದಾಳೆ.
ಚಿಲುತಾಲ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದು, ದೂರಿನಲ್ಲಿ ಹರಿಯಾಣ ಮೂಲದ ವ್ಯಕ್ತಿಯಿಂದ ತನ್ನ ತಾಯಿ ಹಣ ಪಡೆದು ನ.23 ರಂದು ಬಲವಂತದಿಂದ ಮದುವೆ ಮಾಡಿದ್ದಾರೆ. ಈಗ ಅಕ್ರಮ ಚಟುವಟಿಕೆಯಲ್ಲಿ ತೊಡಗುವಂತೆ ನಿರಂತರವಾಗಿ ಆತ ಹಲ್ಲೆ ನಡೆಸುತ್ತಿದ್ದಾನೆ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಪೊಲೀಸರು ಆಕೆಯ ಕುಟುಂಬಸ್ಥರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಮನೋಜ್ ಅವಸ್ತಿ ತಿಳಿಸಿದ್ದಾರೆ.ಮಹಿಳೆಯ ಇಬ್ಬರು ಹಿರಿಯ ಸಹೋದರಿಯರು ಸಹ ಹರಿಯಾಣದಲ್ಲಿ ಮದುವೆಯಾಗಿದ್ದಾರೆ. ಆಕೆಯ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಯುವತಿಯ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಚಿಲುತಾಲ್ ಪೊಲೀಸ್ ಠಾಣೆ ಎಸ್ಎಚ್ಒ ಸಂಜಯ್ ಮಿಶ್ರಾ ಹೇಳಿದ್ದಾರೆ.