ನ್ಯೂಸ್ ನಾಟೌಟ್ : ಹೆತ್ತ ತಾಯಿಯೊಬ್ಬಳು ತನ್ನ ನವಜಾತ ಶಿಶುವೊಂದನ್ನು (Newborn Baby) ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ರಾಯಚೂರಿನ ದೇವದುರ್ಗ ಪಟ್ಟಣದ ಬಸ್ಸ್ಟ್ಯಾಂಡ್ ಬಳಿ ಇರುವ ಚರಂಡಿಗೆ ಎಸೆದು ಓಡಿದ ಘಟನೆ ನಡೆದಿದೆ ಇಂದು(ಡಿ.14) ನಡೆದಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದ್ದು, ಮಾಂಸದ ಮುದ್ದೆ ಸಮೇತ ನವಜಾತ ಶಿಶುವನ್ನು ತಾಯಿಯೊಬ್ಬಳು ಎಸೆದು ಓಡಿದ್ದಾಳೆ ಎನ್ನಲಾಗಿದೆ. ಬಸ್ ಸ್ಟ್ಯಾಂಡ್ನ ಚರಂಡಿಯಲ್ಲಿ ಬಾಕ್ಸ್ ಪತ್ತೆಯಾಗಿದ್ದು, ಶಿಶು ಕೊನೆಯುಸಿರೆಳೆದಿತ್ತು.
ಚರಂಡಿಯಲ್ಲಿ ಬಿದ್ದಿದ್ದ ಶಿಶುವಿನ ದೇಹವನ್ನು ಸಾರ್ವಜನಿಕರೇ ಹೊರ ತೆಗೆದಿದ್ದಾರೆ. ಸಾರ್ವಜನಿಕರೇ ಶಿಶುವಿನ ಅಂತ್ಯಕ್ರೀಯೆ ನೆರವೇರಿಸಿದ್ದು, ಪ್ರಕರಣ ದಾಖಲಾಗಿದೆ.