ನ್ಯೂಸ್ ನಾಟೌಟ್ : ನಿಮ್ಮತ್ರ ಒಂದೇ ಮೊಬೈಲ್ ಫೋನ್ ನಲ್ಲಿ ಎರಡು ಸಿಮ್ ಕಾರ್ಡ್ ಇದೆ. ಆದರೆ ಆ ಎರಡೂ ಸಿಮ್ ಕಾರ್ಡ್ ಗಳಿಂದ ವಾಟ್ಸಾಪ್ ಖಾತೆಯನ್ನು ಪ್ರತ್ಯೇಕವಾಗಿ ಹೊಂದಬೇಕು ಅನ್ನುವ ಅಭಿಲಾಷೆ ಇರುತ್ತದೆ. ಆದರೆ ಎಷ್ಟೋ ಜನರಿಗೆ ಈ ಟೆಕ್ನಿಕಲ್ ವಿಚಾರ ಗೊತ್ತೇ ಇರುವುದಿಲ್ಲ. ಅಂಥಹವರಿಗಾಗಿ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ವುಳ್ಳ ಸ್ಟೋರಿ.
ಮೇಟಾ ಇದೀಗ ಬಳಕೆದಾರರ ಹಿತಾಸಕ್ತಿಯನ್ನು ಗಮನಿಸಿಕೊಂಡು ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಪ್ರಕಾರವಾಗಿ ನೋಡುವುದಾದರೆ ಒಂದೇ ಖಾತೆಯಿಂದ ಎರಡು ವಾಟ್ಸಾಪ್ ಖಾತೆಗಳನ್ನು ನಿಭಾಯಿಸಬಹುದಾಗಿದೆ. ಒಂದಷ್ಟು ನಿಯಮಾವಳಿಗಳನ್ನು ಪಾಲಿಸುವ ಅಗತ್ಯವಿದೆ.
ಮೊದಲನೆಯದಾಗಿ ವಾಟ್ಸಾಪ್ ಹೊಸ ಆಪ್ ಅಪ್ಡೇಟ್ ಆಗಿರುವಂತೆ ನೋಡಿಕೊಳ್ಳಬೇಕು. ವಾಟ್ಸಾಪ್ ಅನ್ನು ನಿಮ್ಮ ಫೋನ್ ನಲ್ಲಿ ತೆರೆಯಿರಿ. ಬಲಗಡೆಯಿಂದ ಮೇಲೆ ಇರುವ ಮೂರು ಚುಕ್ಕಿಯ ಜಾಗದಲ್ಲಿ ಒತ್ತಿ ಸೆಟ್ಟಿಂಗ್ ತೆರೆಯಿರಿ. ಆಗ ಕೆಳಗಿನ ಭಾಗದಲ್ಲಿ ಬರುವ ಅಕೌಂಟ್ಸ್ ಅನ್ನುವುದನ್ನು ಒತ್ತಿ. Add Account’ ಅಂತ ಕ್ಲಿಕ್ ಮಾಡಿ ಮುಂದಿನ ಬಟನ್ ಗೆ ಅನುಮತಿ ಕೊಡಿ. ನಂತರ ನಿಮ್ಮ ಫೋನ್ ನಂಬರ್ ನಮೂದಿಸಿ ನೆಕ್ಸ್ಟ್ ಅಂತ ಒತ್ತಿರಿ. ಸ್ಕ್ರೀನ್ ಮೇಲೆ ಕಾಣಿಸುವ ಸೂಚನೆಗಳನ್ನು ಪಾಲಿಸಿ. ಸಂದೇಶ ಬಂದಾಗ ಯಾವ ಸಂಖ್ಯೆಗೆ ಸಂದೇಶ ಬಂತು ಅನ್ನೋದನ್ನು ನೋಟಿಫಿಕೇಶನ್ ನಲ್ಲೇ ಆಪ್ ತೋರಿಸುವುದು.
ಆದರೆ ಎರಡೂ ವಾಟ್ಸಾಪ್ ಖಾತೆಗಳಿಗೆ ನೀವು ನೋಟಿಫಿಕೇಶನ್ ಧ್ವನಿಯನ್ನು ಪ್ರತ್ಯೇಕವಾಗಿ ಹೊಂದಿಸಿಟ್ಟರೆ, ಯಾವುದರಿಂದ ಸಂದೇಶ ಬಂತು ಎಂಬುದನ್ನು ಫೋನ್ ನೋಡದೆಯೇ ತಿಳಿಯಲು ಸಾಧ್ಯವಾಗುತ್ತದೆ. ನೋಟಿಫಿಕೇಶನ್ ಸ್ಪರ್ಶಿಸಿದ ತಕ್ಷಣ ನೀವು ಆಯಾ ಖಾತೆಯ ವಾಟ್ಸಾಪ್ ಗೆ ನೇರವಾಗಿ ಹೋಗಬಹುದು. ಇಲ್ಲವೆಂದಾದರೆ, ಈಗಾಗಲೇ ತೆರೆದಿರುವ ವಾಟ್ಸಾಪ್ ನಲ್ಲಿ ಹಿಂದೆ ಹೇಳಿದಂತೆ ಸೆಟ್ಟಿಂಗ್ಸ್ ಗೆ ಹೋದರೆ, ಅಲ್ಲೇ ಕೆಳಗೆ ‘Switch Accounts’ ಎಂಬ ಆಯ್ಕೆ ಕಾಣಿಸಿಕೊಳ್ಳುವುದು. ಅದನ್ನು ಒತ್ತಿ ಮುಂದುವರಿಯಬಹುದು.