ನ್ಯೂಸ್ ನಾಟೌಟ್ : ಸಂಸತ್ ಭವನದಲ್ಲಿ ಸಂಭವಿಸಿದ್ದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಉತ್ತರಕ್ಕೆ ಒತ್ತಾಯಿಸಿ, ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ವಿಪಕ್ಷಗಳ 49 ಸದಸ್ಯರನ್ನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ (ಡಿ.೧೯) ಅಮಾನತ್ತುಗೊಳಿಸಿದ್ದಾರೆ.
ಸೋಮವಾರ ಕಲಾಪ ಮುಗಿಯುವವರೆಗೆ ರಾಜ್ಯಸಭೆ ಮತ್ತು ಲೋಕಸಭೆಯಿಂದ ಒಟ್ಟು 92 ಸಂಸದರನ್ನು ಅಮಾನತ್ತುಗೊಳಿಸಲಾಗಿತ್ತು. ಮಂಗಳವಾರ ಅಮಾನತ್ತಾದವರಲ್ಲಿ ನ್ಯಾಷನಲ್ ಕಾನ್ಸರೆನ್ಸ್ ಫಾರೂಕ್ ಅಬ್ದುಲ್ಲಾ ಹಾಗೂ ಕಾಂಗ್ರೆಸ್ ಮುಖಂಡರಾದ (Congress Leaders) ಶಶಿ ತರೂರ್, ಮನೀಶ್ ತಿವಾರಿಯೂ ಸೇರಿದ್ದಾರೆ ಎನ್ನಲಾಗಿದೆ.
ಡಿ. 13ರಂದು ನಡೆದಿದ್ದ ಲೋಕಸಭೆಯಲ್ಲಿನ ಭದ್ರತಾ ಲೋಪಕ್ಕೆ ಅಮಿತ್ ಶಾ ಪ್ರತಿಕ್ರಿಯೆ ನೀಡುವಂತೆ ವಿರೋಧ ಪಕ್ಷಗಳ INDIA ಒಕ್ಕೂಟದ ಸದಸ್ಯರು ಕಳೆದ ಕೆಲ ದಿನಗಳಿಂದ ತೀವ್ರ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಫಲಕ ಹಿಡಿದು ಮತ್ತು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಶಿಸ್ತಿನ ವರ್ತನೆಗಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಿಂದ ಒಟ್ಟು 141 ಸದಸ್ಯರನ್ನು ಅಮಾನತುಗೊಳಿಸಿದ್ದು, ಇತಿಹಾಸವಾಗಿದೆ.
ಸಂಸತ್ ಭದ್ರತಾ ಲೋಪ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪಟ್ಟು ಹಿಡಿದು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ 79 ಸದಸ್ಯರನ್ನು ಸೋಮವಾರ ಅಮಾನತ್ತು ಮಾಡಲಾಗಿತ್ತು.
ಈ ಪೈಕಿ 11 ಸದಸ್ಯರ ನಡವಳಿಕೆ ಪ್ರಕರಣವನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದ್ದು, ಆ ವರದಿ ಬರುವವರೆಗೆ ಸದನದಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ ಎಮದು ವರದಿ ತಿಳಿಸಿದೆ.