ನ್ಯೂಸ್ ನಾಟೌಟ್ : ಬೂದು ಕುಂಬಳಕಾಯಿ ಅಂದ್ರೆ ಸಾಕು. ತಕ್ಷಣ ನೆನಪಾಗುವುದು ಮಾಟ, ಮಂತ್ರ, ದೃಷ್ಟಿ ತಗೆಯುವಿಕೆ ಮುಂತಾದ ಮೂಢನಂಬಿಕೆ. ಯಾಕೆಂದರೆ ಇದನ್ನು ಹೆಚ್ಚಾಗಿ ಇಂಥಾ ಪದ್ಧತಿಗಳಿಗೇ ಸೀಮಿತಗೊಳಿಸಲಾಗಿದೆ. ಆದ್ರೆ ಬೂದು ಕುಂಬಳಕಾಯಿಯಲ್ಲಿರುವ ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ.
ಬೂದು ಕುಂಬಳಕಾಯಿ ಮೂಡನಂಬಿಕೆ ಆಯುರ್ವೇದದಲ್ಲಿ ಅತ್ಯುನ್ನತ ಸ್ಥಾನ ಪಡೆದ ತರಕಾರಿಗಳಲ್ಲಿ ಒಂದೆನಿಸಿದರೂ,ಪುರಾತನ ಕಾಲದಿಂದಲೂ ಕುಂಬಳಕಾಯಿಯ ಆರೋಗ್ಯದ ಲಾಭಗಳ ಬಗೆಗೆ ನಮ್ಮ ಹಿರಿಯರಿಗೆ ಸಾಕಷ್ಟು ತಿಳಿದಿದ್ದವು. ಹಾಗಾಗಿ, ಹಿಂದಿನಿಂದಲೂ ಕೆಲವರು ಬೂದುಕುಂಬಳಕಾಯಿಯ ಬಳಕೆಯನ್ನು ಉಪಯೋಗಿಸುತ್ತಿದ್ದರು.ಇನ್ನೂ ಕೆಲವರು ಬೂದುಕುಂಬಳಕಾಯಿಯನ್ನು ಮನೆಯೊಳಗೆ ತರಬಾರದು.ಅರ್ಧ ತುಂಡರಿಸಿದ ಬೂದುಕುಂಬಳಕಾಯಿಯನ್ನು ಮನೆಯೊಳಗೆ ಇಟ್ಟು ಕೊಳ್ಳಬಾರದು.ಎಲ್ಲಾದರೂ ಶುಭ ಕಾರ್ಯಗಳಿಗೆ ಹೋದಾಗ ಬೂದು ಕುಂಬಳಕಾಯಿ ಮನೆಯಲ್ಲಿರಬಾರದು ಅನ್ನುವ ಒಂದು ವರ್ಗವೂ ಇದೆ. ಆದರೆ ಈ ಮೂಡನಂಬಿಕೆಗಳನ್ನು ಹೊರತು ಪಡಿಸಿ ಯೋಚಿಸೋದಾದ್ರೆ ಇದು ಅತ್ಯಂತ ಕಡಿಮೆ ಕ್ಯಾಲರಿಯಿರುವ, ಸಿಕ್ಕಾಪಟ್ಟೆ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಈ ಕುಂಬಳಕಾಯಿ.
ಬೂದುಕುಂಬಳಕಾಯಿ ಹೃದ್ರೋಗಿಗಳಿಗೆ ಅತ್ಯಂತ ಒಳ್ಳೆಯ ಆಹಾರ. ಇದರ ಸೇವನೆಯಿಂದ ಕೊಲೆಸ್ಟ್ರಾಲ್ ಏರಿಕೆಯಾಗದು. ಇದು ರಕ್ತಪರಿಚಲನೆಯನ್ನೂ ಚುರುಕುಗೊಳಿಸುವುದರಿಂದ ಹೃದಯಕ್ಕೆ ಸರಿಯಾಗಿ ರಕ್ತ ಸಂಚಾರವಾಗಲು ಸಹಾಯ ಮಾಡುತ್ತದೆ.
ಕಿಡ್ನಿಯ ಸಮಸ್ಯೆಯಿರುವ ಮಂದಿಗೂ ಇದು ಬಹಳ ಒಳ್ಳೆಯದು.ಇದು ಕಿಡ್ನಿಯನ್ನು ಡಿಟಾಕ್ಸ್ ಮಾಡಿ, ದೇಹದಿಂದ ಕಲ್ಮಶಗಳನ್ನು ಹೊರಹಾಕುವಂತೆ ಮಾಡುತ್ತದೆ ಹಾಗೂ ನಮ್ಮನ್ನು ಸದಾ ಕಾಲ ಆರೋಗ್ಯದಲ್ಲಿರುವಂತೆ ನೋಡಿಕೊಳ್ಳುತ್ತದೆ.
ಅನೇಕರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರಿಗೂ ಕೂಡ ಬೂದುಕುಂಬಳಕಾಯಿ ಉತ್ತಮ ಔಷಧಿ. ಇದು ಕಫವನ್ನು ತೆಗೆದು ಹಾಕಿ, ಕಟ್ಟಿದ ಎದೆ, ಮೂಗನ್ನು ಸರಿಪಡಿಸುತ್ತದೆ. ಅಲರ್ಜಿ ಹಾಗೂ ಉಸಿರಾಟದ ಸಮಸ್ಯೆಯಿದ್ದರೆ ಇದು ಒಳ್ಳೆಯದು.ಆಗಾಗ ಕಾಡುವ ಉಸಿರಾಟದ ಸಮಸ್ಯೆಯನ್ನು ಕ್ರಮೇಣ ಹೋಗಲಾಡಿಸುತ್ತದೆ.
ಇತ್ತೀಚೆಗಿನ ದಿನಗಳಲ್ಲಿ ಕಿಟೋ ಡಯಟ್ ಮಾಡುವ ಮಂದಿಗೂ ಇದು ಒಳ್ಳೆಯದು.ಇದರಲ್ಲಿ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್ನ ಮಟ್ಟ ಬಹಳ ಕಡಿಮೆ ಇರುವುದರಿಂದ ಡಯೆಟ್ಗೆ ಬಹಳ ಒಳ್ಳೆಯ ಆಹಾರ.
ಇದರಲ್ಲಿ ಸಾಕಷ್ಟು ವಿಟಮಿನ್ ಇ ಹಾಗೂ ಆಂಟಿ ಆಕ್ಸಿಡೆಂಟ್ಗಳು ಹೇರಳವಾಗಿರವುದರಿಂದ ಚರ್ಮಕ್ಕೆ ಇದು ಬಹಳ ಒಳ್ಳೆಯದು. ಚರ್ಮದಲ್ಲಿ ತೇವಾಂಶವನ್ನು ಉಳಿಸಿ ಒಣಗದಂತೆ ನೋಡಿಕೊಂಡು ಚರ್ಮವನ್ನು ಹೊಳಪಾಗಿಸುತ್ತದೆ.
ಚರ್ಮದ ಸಮಸ್ಯೆಗಳಾದ ಕಜ್ಜಿ, ಅಲರ್ಜಿಗಳು, ಉರಿಯೂತದಂತಹ ಸಮಸ್ಯೆಗಳಿಗೆ ಇದು ಬಹಳ ಒಳ್ಳೆಯದು. ವಾತಾವರಣದ ಮಾಲಿನ್ಯದಿಂದ ಅಥವಾ ವಿಪರೀತ ಧೂಳಿನಿಂದ ಉಂಟಾಗುವ ಚರ್ಮದ ಸಮಸ್ಯೆಗಳಿಗೆ, ಸೂರ್ಯನ ಯುವಿ ಕಿರಣಗಳಿಂದಾಗುವ ಹಾನಿಗೆ ಕೂಡಾ ಇದು ಒಳ್ಳೆಯದು ಎಂದು ಹೇಳಲಾಗಿದೆ.
ಅನೇಕರಿಗೆ ತಲೆಗೂದಲು ಉದುರುವ ಸಮಸ್ಯೆ ಕಾಡುತ್ತಿರುತ್ತದೆ. ಹೀಗಾಗಿ ನೀವು ಬೂದು ಕುಂಬಳ ಕಾಯಿಯನ್ನು ಸೇವನೆ ಮಾಡಿದರೆ ಕೂದಲ ಬೆಳವಣಿಗೆಗೂ ಬೂದುಕುಂಬಳಕಾಯಿ ಒಳ್ಳೆಯದು. ಉದ್ದ ಹಾಗೂ ತುಂಡಾಗದ ಗಟ್ಟಿಮುಟ್ಟಾದ ಕೂದಲಿಗೆ ಇದು ಬಹಳ ಪೋಷಕಾಂಶಗಳನ್ನು ಒದಗಿಸುತ್ತದೆ. ಇದನ್ನು ಜೆಲ್ನಂತೆ ಕೂದಲಿಗೆ ಹಚ್ಚುವುದರಿಂದಲೂ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.
ಹೆಚ್ಚಾಗಿ ಚಳಿಗಾಲದಲ್ಲಿ ಜಾಸ್ತಿ ಕಾಡುವ ತಲೆ ಹೊಟ್ಟು ಅಥವಾ ದೀರ್ಘಕಾಲದ ಸಮಸ್ಯೆಯಾಗಿದ್ದರೂ ಕೂಡ ಬೂದು ಕುಂಬಳಕಾಯಿಯಿಂದ ಪರಿಹಾರ ಕಂಡುಕೊಳ್ಳಬಹುದು. ವಾತಾವರಣದ ಕಲುಶಿತತೆಯಿಂದ ಹೆಚ್ಚುವ ತಲೆಹೊಟ್ಟಿನ ಸಮಸ್ಯೆಗೂ ಇದು ಪರಿಹಾರ ಒದಗಿಸುತ್ತದೆ.
ಇದರಲ್ಲಿ ಸಾಕಷ್ಟು ವಿಟಮಿನ್ ಸಿ ಇರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ದೇಹದ ಉಷ್ಣತೆ ಕಡಿಮೆಗೊಳಿಸುವ ಶಕ್ತಿ ಇರುವುದರಿಂದ ಇದು ಜ್ವರವನ್ನು ಕಡಿಮೆ ಮಾಡುವಲ್ಲಿ ಸಹಾಯ ಆಡುತ್ತದೆ.
ಜಾಂಡೀಸ್ ಅಥವ ಅರಿಶಿನ ಕಾಯಿಲೆಯಂತಹ ರೋಗಕ್ಕೂ ಬೂದು ಕುಂಬಳಕಾಯಿಯಲ್ಲಿ ಉತ್ತರವಿದೆ. ಇದು ಪಿತ್ತಕೋಶಕ್ಕೆ ಅತ್ಯಂತ ಒಳ್ಳೆಯ ಆಹಾರವಾಗಿರುವುದರಿಂದ ಜಾಂಡೀಸ್ಗೂ ಒಳ್ಳೆಯದು. ಇದರ ಎಲೆಗಳು ಜ್ವರ ಹಾಗೂ ಅರಿಶಿನ ಕಾಯಿಲೆಗೆ ಒಳ್ಳೆಯ ಮದ್ದು.
ಅಸಿಡಿಟಿಯಂತಹ ಸಾಮಾನ್ಯವಾಗಿ ಎಲ್ಲರೂ ತೊಂದರೆ ಪಡುವ ಸಮಸ್ಯೆಗೂ ಬೂದುಕುಂಬಳದಲ್ಲಿ ಉತ್ತರವಿದೆ. ದೇಹದಲ್ಲಿರುವ ಆ್ಯಸಿಡಿಕ್ ಅಂಶಗಳ ಪ್ರವರ್ಧನೆಗೆ ಇದು ಆಸ್ಪದ ಕೊಡುವುದಿಲ್ಲವಾದ್ದರಿಂದ ಇದು ಆ್ಯಸಿಡಿಟಿಗೂ ಒಳ್ಳೆಯದು.
ನಿದ್ದೆಯ ಸಮಸ್ಯೆಯಿಂದ ಬಳಲುವ ಮಂದಿಗೆ, ಇನ್ಸೋಮ್ನಿಯಾದಂತಹ ಕಾಯಿಲೆಯ ಸಮಸ್ಯೆ ಇರುವ ಮಂದಿಗೆ ಈ ಬೂದುಕುಂಬಳಕಾಯಿ ಒಳ್ಳೆಯ ನಿದ್ದೆಯನ್ನೂ ತಂದು ಕೊಡುವುದು. ಹಾಗಾಗಿ ಇದು ನಿದ್ರೆಗೂ ಬಹಳ ಒಳ್ಳೆಯದು.