ನ್ಯೂಸ್ ನಾಟೌಟ್ :ಕಾರೊಂದು ಮರಕ್ಕೆ ಢಿಕ್ಕಿಯಾಗಿ ಓರ್ವ ದಾರುಣವಾಗಿ ಅಂತ್ಯವಾದ ಘಟನೆ ಕೇರಳದ ಅಂಗಮಾಲಿಯ ಪೇರಂಬೂರ್ ಬಳಿ ನಡೆದಿದೆ.ಕೊಡಗಿನಿಂದ ಶಬರಿಮಲೆಗೆ ಕಾರಿನಲ್ಲಿ ತೆರಳಿದ್ದ ತಂಡವೊಂದು ಮರಳಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಕುಶಾಲನಗರದ ಹಾರಂಗಿ ದೊಡ್ಡತ್ತೂರು ನಿವಾಸಿ ಕುಂಞಿರಾಮ ಅವರ ಪುತ್ರ ಆಟೋ ಚಂದ್ರ ಕೊನೆಯುಸಿರೆಳೆದವರೆಂದು ತಿಳಿದು ಬಂದಿದೆ.ದುರ್ಘಟನೆಯಲ್ಲಿ ಕುಶಾಲನಗರದ ಲಿಂಗಂ, ಹರೀಶ್, ಸಂತೋಷ್ ಗಾಯಗೊಂಡಿದ್ದಾರೆ.ಅವರನ್ನು ಪೆರಂಬೂರಿನ ರಾಜಗಿರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.