- +91 73497 60202
- [email protected]
- November 23, 2024 12:40 AM
ಕರ್ನಾಟಕದಲ್ಲಿ ಮತ್ತೆ ಸ್ಯಾಟಲೈಟ್ ಫೋನ್..! ನಸುಕಿನ ಜಾವ 3 ಗಂಟೆಗೆ ಪಾಕಿಸ್ತಾನಕ್ಕೆ ಕಾಲ್ ಮಾಡಿದ್ಯಾರು..?
ನ್ಯೂಸ್ ನಾಟೌಟ್ : ಮತ್ತೆ ಸ್ಯಾಟಲೈಟ್ ಪೋನ್ (Satellite Phone) ಯಾದಗಿರಿ ನಗರದಲ್ಲಿ ಪತ್ತೆಯಾಗಿದ್ದು, ಯಾದಗಿರಿ ಜಿಲ್ಲೆಯ ಸುರಪುರ (Surapura) ತಾಲೂಕಿನ ಶೆಳ್ಳಗಿಯಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ (Pakistan) ಕರೆ ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸೆಪ್ಟೆಂಬರ್ 17 ರಂದು ಶೆಳ್ಳಗಿ ಗ್ರಾಮದ ಕೃಷಿ ಪ್ರದೇಶವೊಂದರಿಂದ ನಸುಕಿನ ಜಾವ 3 ಗಂಟೆ ಸುಮಾರಿಗೆ ಕರೆ ಹೋಗಿದೆ ಎನ್ನಲಾಗಿದೆ. ಸೆಪ್ಟೆಂಬರ್ 17 ರಂದು ಪಾಕ್‌ಗೆ ಕರೆ ಹೋಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ದಿನದಂದೇ ಸ್ಯಾಟಲೈಟ್ ಪೋನ್ ಕರೆ ಹೋಗಿದ್ದು, ಚೀನಾ ನಿರ್ಮಿತ ಸ್ಯಾಟಲೈಟ್ ಪೋನ್‌ನಿಂದ ಕರೆ ಮಾಡಲಾಗಿದೆ. ಸೆಪ್ಟೆಂಬರ್ 19 ರಂದು ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ಸಿಕ್ಕಿದ್ದು, ಜಿಪಿಎಸ್ ಲೊಕೇಶನ್ ಆಧಾರದ ಮೇಲೆ ಕೇಂದ್ರ ಸಂಸ್ಥೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2 ವರ್ಷದ ಹಿಂದೆ ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದ ಹೊರವಲಯದಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿತ್ತು. 2021 ಏಪ್ರಿಲ್ ತಿಂಗಳಲ್ಲಿ ಹೆಡಗಿಮದ್ರಾದಿಂದ ಪಾಕ್‌ಗೆ ಸ್ಯಾಟಲೈಟ್ ಕರೆ ಮಾಡಲಾಗಿತ್ತು. ಅದೇ ರೀತಿ 2014 ರಲ್ಲಿ ಮೊಸ್ಟ್ ವಾಂಟೆಡ್ ಉಗ್ರರು ಯಾದಗಿರಿಯಲ್ಲಿ ಅಡಗಿದ್ದರು. 2014 ರಲ್ಲಿ ಮುಂಬೈ ಹಾಗೂ ಹೈದರಾಬಾದ್‌ನ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಯಾದಗಿರಿಗೆ ಭೇಟಿ ನೀಡಿದ್ದರು ಎಂದು ವರದಿ ತಿಳಿಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ