ನ್ಯೂಸ್ ನಾಟೌಟ್ :ರೈತ ದೇಶದ ಬೆನ್ನೆಲುಬು..ಅವರಿರೋದಕ್ಕೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುತ್ತಿದ್ದಾರೆ.ಹೀಗಾಗಿ ತುತ್ತು ಅನ್ನದ ಹಿಂದೆ ರೈತನ ಕಠಿಣ ಶ್ರಮ ಅಡಕವಾಗಿದೆ.ಇಂತಹ ರೈತರನ್ನು ಸನ್ಮಾನಿಸುವುದು,ಅವರಿಗೆ ಗೌರವ ನೀಡೋದು ಸಮಾಜದ ಕರ್ತವ್ಯವೂ ಹೌದು..ಇದೀಗ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಲು ಕರಾವಳಿಯ ರೈರೊಬ್ಬರು ಸಿದ್ಧರಾಗಿದ್ದಾರೆ..!
ಹೌದು,ವರ್ಷದಲ್ಲಿ ಒಂದು ಕೋಟಿಗೂ ಅಧಿಕ ವಹಿವಾಟು ನಡೆಸಿದ ಉಡುಪಿ ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕ ಹಾಗೂ ಪ್ರಗತಿಪರ ರೈತ ರಮೇಶ್ ನಾಯಕ್ ಅವರಿಗೆ ಈ ಪ್ರಶಸ್ತಿ ಒಲಿದು ಬಂದಿದೆ. ಕೇಂದ್ರ ಸರ್ಕಾರದ ‘ಬಿಲಿಯನೇರ್ ರೈತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.ನಾಳೆ(ಡಿಸೆಂಬರ್ 7 ರಂದು) ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ನಾಯಕ್ ಅವರು ಶ್ರಮ ಜೀವಿ. ಕೆದೂರು ಗ್ರಾಮದ ತಮ್ಮ 13 ಎಕರೆ ಜಮೀನಿನಲ್ಲಿ ತಾವು ಕಂಡ ಕನಸಿನಂತೆ 1,634 ವಿವಿಧ ಬಗೆಯ ಹಣ್ಣಿನ ಮರಗಳನ್ನು ಬೆಳೆದು ಸಮೃದ್ಧ ಇಳುವರಿ ಹಾಗೂ ವಾರ್ಷಿಕ ಒಂದು ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿದ್ದಾರೆ ಅನ್ನೋದು ವಿಶೇಷ. ನಾಯಕ್ ಅವರು ತಮ್ಮ ಜಮೀನಿನಲ್ಲಿ 500 ಡ್ರ್ಯಾಗನ್ ಫ್ರೂಟ್ ಮರಗಳಲ್ಲದೇ 285 ಬಗೆಯ ಹಲಸಿನ ಮರಗಳನ್ನು ಬೆಳೆಸಿದ್ದಾರೆ. ಅಲ್ಲದೆ 30,000 ಅನಾನಸ್ ಗಿಡಗಳನ್ನು ಬೆಳೆಸಿ ಇತರರಿಗೂ ಮಾದರಿಯಾಗಿದ್ದಾರೆ.