ನ್ಯೂಸ್ ನಾಟೌಟ್ : ಇತ್ತೀಚೆಗೆ ಕಾಡಾನೆ ದಾಳಿಗಳು ಮತ್ತು ಉಪಟಳಗಳು ಹೆಚ್ಚಾಗಿದ್ದು, ನಿನ್ನೆ(ಡಿ.೨೦)ರ ರಾತ್ರಿ ಪುತ್ತೂರಿನ ಕೃಷಿತೋಟಕ್ಕೆ ದಾಳಿ ಮಾಡಿ ಅಪಾರ ಬೆಳೆ ಹಾನಿ ಮಾಡಿದ ಘಟನೆ ನಡೆದಿದೆ.
ಇತ್ತೀಚೆಗೆ ಹಾಸನದಲ್ಲಿ ಕಾಡಾನೆ ಸೆರೆಹಿಡಿಯುವ ವೇಳೆ ನಡೆದ ಅಚಾತುರ್ಯದಿಂದ ೮ ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನನ್ನು ಕಳೆದುಕೊಳ್ಳಬೇಕಾಯಿತು.
ಈಗ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಕೃಷಿತೋಟಕ್ಕೆ ದಾಳಿ ಮಾಡಿದ ಕಾಡಾನೆ ವರದಿಯಾಗಿದೆ.
ತೋಟಕ್ಕೆ ನುಗ್ಗಿ ಅಡಿಕೆ,ಬಾಳೆ,ತೆಂಗು ಗಿಡಗಳನ್ನು ನಾಶ ಮಾಡಿದ ಕಾಡಾನೆ ಅಪಾರ ಬೆಳೆ ನಾಶ ಮಾಡಿದೆ.
ಪುತ್ತೂರಿನ ಪೆರ್ನಾಜೆ ಎಂಬಲ್ಲಿ ಆನೆ ಪತ್ತೆಯಾದ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಪುತ್ತೂರಿನ ಈ ಭಾಗದಲ್ಲಿ ಈ ಭಾಗಕ್ಕೆ ದಾಳಿ ನಡೆಸಿರುವ ಕಾಡಾನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಳೆ ಪರಿಹಾರಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.