ನ್ಯೂಸ್ ನಾಟೌಟ್ : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಮದ್ಯಪಾನ ಪ್ರಿಯರಿಗೆ ಸರ್ಕಾರದಿಂದ ವಿಶೇಷ ಸವಲತ್ತುಗಳನ್ನು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಸದಸ್ಯರು ಬೆಳಗಾವಿಯಲ್ಲಿ ಇಂದು(ಡಿ.14) ಪ್ರತಿಭಟನೆ ನಡೆಸಿದರು.
ಸರ್ಕಾರದ ಪರವಾಗಿ ಸಚಿವ ಸಂತೋಷ್ ಲಾಡ್ (Santosh Lad) ಪ್ರತಿಭಟನಾಕಾರರ ಬೇಡಿಕೆಗಳನ್ನ ಆಲಿಸಿ, ಮನವಿ ಸ್ವೀಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಬೆಳಗಾವಿಯ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. `ನಿತ್ಯ ದುಡಿ – ಸತ್ಯ ನುಡಿ, ಸ್ವಲ್ಪ ಕುಡಿ-ಮನೆಗೆ ನಡಿ’ ಘೋಷವಾಕ್ಯದೊಂದಿಗೆ ಮದ್ಯಪಾನ ಪ್ರಿಯರು ಪ್ರತಿಭಟನೆ ಮಾಡಿದ್ದಾರೆ.
ಪ್ರತಿವರ್ಷ ಡಿಸೆಂಬರ್ 31ರ ದಿನವನ್ನು ಮದ್ಯಪಾನ ಪ್ರಿಯರ ದಿನವನ್ನಾಗಿ ಆಚರಣೆ ಮಾಡಬೇಕು. ಅಂದು ಎಲ್ಲಾ ರೀತಿಯ ಬಾರ್ , ರೆಸ್ಟೋರೆಂಟ್ನಲ್ಲಿ 50% ರಿಯಾಯಿತಿ ನೀಡಬೇಕು. ʻಕುಡುಕʼ ಎಂಬ ಪದಬಳಕೆ ನಿಷೇಧ ಮಾಡಬೇಕು, ಮದ್ಯಪಾನ ಪ್ರಿಯರ ಅಭಿವೃದ್ಧಿ ನಿಗಮ ಆರಂಭಿಸಿ 10% ಅನುದಾನ ನೀಡಬೇಕು.
ಪ್ರತಿ ಬಾಟಲಿಗೆ ವಿಮೆ (Insurance) ನೀಡಬೇಕು, ಪ್ರತಿ ಬಾರ್ ಮುಂದೆ ಅಂಬುಲೆನ್ಸ್ ಸೇವೆ ನೀಡಬೇಕು. ಬಾರ್ ಪಕ್ಕದಲ್ಲಿ ಕುಡುಕರ ವಿಶ್ರಾಂತಿಗಾಗಿ ಭವನ ನಿರ್ಮಾಣ ಮಾಡಬೇಕು ಎಂದು ಸಂಘದ ಪ್ರಮುಖರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.