ನ್ಯೂಸ್ ನಾಟೌಟ್ : ಬಹುನಿರೀಕ್ಷಿತ ಚಿತ್ರ ಸಲಾರ್ ಡಿ.22ರಂದು ತೆರೆ ಕಂಡಿದೆ. ಟಾಲಿವುಡ್ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಈ ಚಿತ್ರ ಎಲ್ಲಾ ವಯೋಮಾನದವರು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ವಿಮರ್ಶೆಯ ಹಲವಾರು ವಿಡಿಯೋಗಳು ಎಲ್ಲಾ ಕಡೆಗಳಲ್ಲಿ ವೈರಲ್ ಆಗುತ್ತಿದ್ದು, ಇವುಗಳೆಲ್ಲದರ ಮಧ್ಯೆ ಗರ್ಭಿಣಿಯೊಬ್ಬರ ಸಲಾರ್ ಚಿತ್ರದ ಬಗ್ಗೆ ಕೊಟ್ಟ ರಿವ್ಯೂ , ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಸಲಾರ್ ಸಿನಿಮಾವನ್ನು ಗರ್ಭಿನಿಯೊಬ್ಬಳು ಥಿಯೇಟರ್ ಗೆ ಹೋಗಿ ನೋಡುತ್ತಾಳೆ.ಈ ವೇಳೆ ಹೊರಗೆ ಬಂದ ಆಕೆಯನ್ನು ಪತ್ರಕರ್ತರು ಚಿತ್ರ ಹೇಗಿತ್ತು ಎಂದು ಕೇಳುತ್ತಾರೆ. ಈ ವೇಳೆ ಆಕೆ ಚಿತ್ರ ಸೂಪರ್ ಆಗಿತ್ತು, ಮಗು ಮ್ಯೂಸಿಕ್ ಎಂಜಾಯ್ ಮಾಡಿ ಕಿಕ್ ಮಾಡುತ್ತಿತ್ತು. ಸಿನಿಮಾ ಮಸ್ತ್ ಆಗಿದೆ. ಮಗು ಕೂಡಾ ಸಿನಿಮಾ ನೋಡಿ ಖುಷಿ ಪಟ್ಟಿದೆ ಎಂದಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜನ ಇಷ್ಟೊಂದು ವೈಲೆಂಟ್ ಮೂವಿ ಗರ್ಭಿಣಿಯರು ನೋಡಬಾರದು ಎಂದಿದ್ದಾರೆ.
ಇನ್ನೂ ಈ ವಿಡಿಯೋ ನೋಡಿದವರಲ್ಲಿ, ಕೆಲವರು ಏನಿದ್ದರೂ ಮೂವಿ ಎಂಜಾಯ್ ಮಾಡುವುದಷ್ಟೆ ಮುಖ್ಯ. ನೀವು ಸಿನಿಮಾ ಎಂಜಾಯ್ ಮಾಡಿದರೆ ಸಾಕು ಎಂದಿದ್ದಾರೆ. ಪ್ರಶಾಂತ್ ನೀಲ್ ಸಿನಿಮಾದ ಬಿಜಿಎಂ, ಮ್ಯೂಸಿಕ್ ಕೇಳಿ ಹೊಟ್ಟೆಯಲ್ಲಿರುವ ಮಗು ಕೂಡಾ ಎಂಜಾಯ್ ಮಾಡಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ಸಲಾರ್ ಚಿತ್ರದ ಮೊದಲ ಭಾಗ ಚೆನ್ನಾಗಿ ಮೂಡಿ ಬಂದಿರೋ ಕಾರಣ, ಎರಡನೇ ಭಾಗ ನೋಡಲು ಜನ ಕಾತುರರಾಗಿರುತ್ತಾರೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಮತ್ತೋರ್ವ ಅಭಿಮಾನಿ ನಾನು ಬಾಹುಬಲಿ ಚಿತ್ರದ ದಾಖಲೆಗಳನ್ನು ಯಾರೂ ಬ್ರೇಕ್ ಮಾಡಲ್ಲ ಅಂತ ಅಂದ್ಕೊಂಡಿದ್ದೆ. ಆದರೆ ಸಲಾರ್ ನನ್ನ ನಂಬಿಕೆಯನ್ನು ಸುಳ್ಳು ಮಾಡಿದೆ ಎಂದು ಹೇಳಿದ್ದಾರೆ. ಇನ್ನು ಸಿನಿಮಾ ನೋಡಿದ ಕನ್ನಡಿಗರು ಸಹ ಮೆಚ್ಚಿಕೊಂಡಿದ್ದು, ಇದು ಉಗ್ರಂ ರಿಮೇಕ್ ಅಲ್ಲ. ಉಗ್ರಂಗೂ,ಸಲಾರ್ಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಂಪೂರ್ಣ ಭಿನ್ನ ಕಥೆಯುಳ್ಳ ಸಿನಿಮಾ ಎಂದಿದ್ದಾರೆ.