ನ್ಯೂಸ್ ನಾಟೌಟ್: ಯುವಕರ ಗುಂಪೊಂದು ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯ ಬಾರ್ ವೊಂದರಲ್ಲಿ ಕುಡಿದು ದಾಂಧಲೆ ಮಾಡಿರುವ ಘಟನೆ ಬುಧವಾರ ವರದಿಯಾಗಿದೆ.
ಕಲ್ಲುಗುಂಡಿಯ ಕೀಲಾರು ಮೂಲೆಯ ಯುವಕ ಸೇರಿದಂತೆ ಮೂರ್ನಾಲ್ಕು ಯುವಕರು ಬಾರ್ ನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕ ಗ್ಲಾಸುಗಳನ್ನು ಪುಡಿಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ದೂರು ತಿಳಿದ ಬೆನ್ನಲ್ಲೇ ಪೊಲೀಸರು ಆಗಮಿಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ ಇಬ್ಬರು ಯುವಕರು ಭಾಗಮಂಡಲ ಮೂಲದವರು ಎಂದು ತಿಳಿದು ಬಂದಿದೆ. ಸದ್ಯ ವಶಕ್ಕೆ ಪಡೆದವರನ್ನು ಸುಳ್ಯ ಠಾಣೆಗೆ ಕರೆದುಕೊಂಡು ಬರಲಾಗಿದೆ ಎನ್ನಲಾಗಿದೆ.