ನ್ಯೂಸ್ ನಾಟೌಟ್ : ಕೋವಿಡ್ ರೂಪಾಂತರಿ JN 1 ಹೊಸ ವೈರಸ್ ಪತ್ತೆ ಬಳಿಕ ಬೆಂಗಳೂರಿನಲ್ಲಿ ಮೊದಲ ಸಾವು ಸಂಭವಿಸಿದೆ. ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಬೆಂಗಳೂರಿನ (Bengaluru) ಚಾಮರಾಜಪೇಟೆಯ 64 ವರ್ಷದ ವೃದ್ಧ ಆಸ್ಪತ್ರೆಯಲ್ಲಿ ಡಿ.20ರಂದು ಕೊನೆಯುಸಿರೆಳೆದಿದ್ದಾರೆ.
ಕಳೆದ ಒಂದು ವಾರದ ಹಿಂದೆಯೇ ಬೆಂಗಳೂರಿನ ಶಿವಾನಂದ್ ಸರ್ಕಲ್ ಬಳಿಯ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದು, 15-12-2023ರಂದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಆದರೆ ಇಂದು(ಡಿ.20) ಆ ವ್ಯಕ್ತಿಯ ರಿಪೋರ್ಟ್ ಬಂದಿದ್ದು ಕೊವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಕಂಡು ಬಂದಿದೆ. ಆದ್ರೆ, ಈ ವ್ಯಕ್ತಿಗೆ ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲ. ಇನ್ನು ಈತನಸಂಪರ್ಕದಲ್ಲಿ ಕಟುಂಬದವರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಕೊವಿಡ್ ನಿಂದ ಮೃತಪಟ್ಟ 64 ವರ್ಷದ ವ್ಯಕ್ತಿಯ ಸ್ಯಾಂಪಲ್ಸ್ ಪಡೆದು ಜೀನೋಮ ಸೀಕ್ವೆನ್ಸಿಂಗ್ ಕಳಿಸಲಾಗಿದ್ದು,. ಈ ವಾರದಲ್ಲಿ ರೀಪೋರ್ಟ್ ಬರಲಿದೆ. ಸದ್ಯ ಕೊನೆಯುಸಿರೆಳೆದ 64 ವರ್ಷದ ವ್ಯಕ್ತಿಗೆ ಶ್ವಾಸಕೋಶದ ಸಮಸ್ಯೆ, ಕ್ಷಯ ರೋಗದಿಂದ ಬಳಳುತ್ತಿದ್ದರು ಎನ್ನಲಾಗಿದೆ.
ಆ ವ್ಯಕ್ತಿ ಒಟ್ಟು 10 ಜನರ ಜೊತೆ ಸಂಪರ್ಕಿತನಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯಾಧಿಕಾರಿಗಳು ಎಲ್ಲರನ್ನೂ 7 ದಿನದ ವರೆಗೂ ಹೋಂ ಐಸೋಲೇಷನ್ ಮಾಡಿದ್ದಾರೆ. ಅಲ್ಲದೇ ಅಕ್ಕಪಕ್ಕದ ನಿವಾಸಿಗಳನ್ನು ಕೂಡಾ ಪರೀಕ್ಷೆ ಎಂದು ವರದಿ ತಿಳಿಸಿದೆ.