ನ್ಯೂಸ್ ನಾಟೌಟ್ :ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಮತ್ತೆ ಬಿಜೆಪಿಗೆ (BJP) ಸೇರ್ಪಡೆ ಆಗ್ತಾರಾ ಅನ್ನುವ ಚರ್ಚೆ ಇದೀಗ ರಾಜಕೀಯ ವಲಯದಲ್ಲಿ ಶುರುವಾಗಿದೆ.ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಬರ್ತಾರೆ ಅನ್ನುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಈ ಚರ್ಚೆ ಶುರುವಾಗಲು ಕಾರಣ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ಹೇಳಿದ್ದ ಆ ಒಂದು ಹೇಳಿಕೆ.ಅದೇನದು?
ಗದಗದ ಪ್ರವಾಸಿ ಮಂದಿರದಲ್ಲಿ ಈ ಬಗ್ಗೆ ಮಾತನಾಡುತ್ತಾ ಕೆ.ಎಸ್.ಈಶ್ವರಪ್ಪ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಹೇಳಿಕೆ ನೀಡುತ್ತಾ”ನಾನು ಶೆಟ್ಟರ್ ಅವರೊಂದಿಗೆ ಆತ್ಮೀಯತೆಯಲ್ಲಿದ್ದೆ.ಅವರಪ್ಪ ಕೂಡಾ ಬಿಜೆಪಿಯಲ್ಲಿ ಇದ್ದವರು. ಹೀಗಾಗಿ ಅವರು ಆತ್ಮೀಯರಾಗಿದ್ದರು.ಹಿಂದುತ್ವದ ರಕ್ತ ಅವರ ಮೈಯಲ್ಲಿ ಹರಿಯುತ್ತಿದೆ. ಕಾಂಗ್ರೆಸ್ (Congress) ಸೇರಿದ್ದಕ್ಕೆ ಅನಿವಾರ್ಯ ಹೇಳಿಕೆ ನೀಡುತ್ತಾರೆ. ಇನ್ನು ಸ್ವಲ್ಪ ದಿನ ಅಷ್ಟೆ. ಬಳಿಕ ನಮ್ಮ ಹತ್ರಾನೇ ಬರುತ್ತಾರೆ. ಆಗ ದೇಶದಲ್ಲಿ ಕಾಂಗ್ರೆಸ್ ರಿಪೇರಿ ಮಾಡೋಕೆ ಆಗಲ್ಲ ಎಂದು ಹೇಳಿದರಲ್ಲದೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಿಗೆ ಕೆಲಸ ಮಾಡಿದವರು ಬಂದರೆ ತುಂಬಾನೆ ಸಂತೋಷ.ರಾಜ್ಯದಲ್ಲಿ ಅವರ ತಂದೆಯೇ ಬಿಜೆಪಿ ಭಾರತೀಯ ಜನಸಂಘಕ್ಕೆ ಬೀಜ ಹಾಕಿದ್ದು. ಅವರು ಕಾಂಗ್ರೆಸ್ಗೆ ಹೋದಾಗ ತುಂಬಾ ನೋವಾಗಿತ್ತು ಎಂದು ಹೇಳಿದ್ದಾರೆ.