ನ್ಯೂಸ್ ನಾಟೌಟ್: ಕಾಂಗ್ರೆಸ್ ಸಂಸದ ಧೀರಜ್ ಸಾಹು ಪ್ರಕರಣ ದೇಶಾದ್ಯಂತ ಚರ್ಚೆಗೀಡಾಗುತ್ತಿದ್ದು, ಅವರ ಕುಟುಂಬಸ್ಥರ ಮನೆ ಹಾಗೂ ಕಚೇರಿಗಳ ಮನೆ ಮೇಲೆ ಐಟಿ ದಾಳಿ ಮಾಡಿದ್ದು, ಬರೋಈಬ್ಬರಿ 351 ಕೋಟಿ ಹಣ ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಡಿಸೆಂಬರ್ 6 ರಂದು ಧೀರಜ್ ಸಾಹುಗೆ ಸಂಬಂಧಿಸಿದ ನಿವೇಶನಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ದಾಳಿಯ ನಂತರ 176 ಚೀಲ ತುಂಬಿದ ನಗದು ವಶಪಡಿಸಿಕೊಳ್ಳಲಾಗಿತ್ತು. ಸುಮಾರು 40 ನೋಟು ಎಣಿಕೆ ಯಂತ್ರಗಳು ಐದು ದಿನಗಳ ಕಾಲ ಈ ಹಣವನ್ನು ಎಣಿಸಿದ್ದವು ಎನ್ನಲಾಗಿದೆ.
ಎಣಿಕೆ ನಂತರ ಕಾಂಗ್ರೆಸ್ ಸಂಸದರ ಮನೆಯಲ್ಲಿ 351ಕೋಟಿ ರೂಪಾಯಿ ಹಣ ಇರುವುದು ಬೆಳಕಿಗೆ ಬಂದಿತ್ತು.
ಐಟಿ ದಾಳಿಯಲ್ಲಿ ಪತ್ತೆಯಾದ ಹಣವನ್ನು ಕಪ್ಪುಹಣ ಎಂದು ಬಿಜೆಪಿ ಆರೋಪಿಸುತ್ತಿದೆ, ಈ ಬಗ್ಗೆ ಏನು ಹೇಳುತ್ತೀರಿ ಎಂದು ಧೀರಜ್ ಸಾಹುವನ್ನು ಪ್ರಶ್ನಿಸಿದ್ದಕ್ಕೆ ‘ನಾವು ಹೊಂದಿರುವ ಎಲ್ಲಾ ವ್ಯವಹಾರಗಳು ನನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿವೆ. ಬಿಜೆಪಿಯವರು ಅದನ್ನು ಹೇಗೆ ಕಪ್ಪು ಹಣ ಎಂದು ಕರೆಯುತ್ತಿದ್ದಾರೆ ಗೊತ್ತಿಲ್ಲ, ಆದಾಯ ತೆರಿಗೆ ಇಲಾಖೆ ಮಾತ್ರ ಅದನ್ನ ಕಪ್ಪುಹಣವೋ, ಬಿಳಿಹಣವೋ ಎಂಬುದಕ್ಕೆ ಹೇಳುತ್ತಾರೆ. ಅವರು ಹೇಳುವವರೆಗೆ ಕಾಯಬೇಕು ಎಂದಿದ್ದಾರೆ.
ಈ ದಾಳಿಯು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಧೀರಜ್ ಸಾಹು, ನೋಡಿ… ಇದು ಆದಾಯ ತೆರಿಗೆ ದಾಳಿಯನ್ನ ಹೊರಗಿನ ಜನರು ಹೇಗೆ ನೋಡುತ್ತಿದ್ದಾರೆಂದು ನಮಗೆ ತಿಳಿದಿಲ್ಲ. ನಾನು ಯಾವುದೇ ಪಕ್ಷವನ್ನು ದೂಷಿಸುತ್ತಿಲ್ಲ. ಆದರೆ ಈ ಹಣ ಕಾಂಗ್ರೆಸ್ ಪಕ್ಷ ಅಥವಾ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ ಎಂದು ನಾನು ಇಷ್ಟು ಹೇಳಬಲ್ಲೆ ಮತ್ತು ಈ ಎಲ್ಲಾ ಹಣ ನಮ್ಮ ಕುಟುಂಬದ ಮಧ್ಯಸಂಸ್ಥೆಗೆ ಸೇರಿದ್ದು ಎಂದು ಹೇಳಿದ್ದಾರೆ.