ನ್ಯೂಸ್ ನಾಟೌಟ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.ರಾಹುಲ್ ಗಾಂಧಿಗೆ ಇದೀಗ ದೆಹಲಿ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹೇಳಿಕೆ ನೀಡಿ ಹಲವು ಬಾರಿ ಕಾನೂನು ಹಿನ್ನಡೆ ಅನುಭವಿಸಿರುವ ರಾಹುಲ್ ಗಾಂಧಿಗೆ ಈ ಸವಾಲು ಎದುರಾಗಿದೆ.
ಮೋದಿ ವಿರುದ್ಧ ರಾಹುಲ್ ನೀಡಿದ ಜೇಬುಗಳ್ಳ ಹೇಳಿಕೆ ಕುರಿತು ದೂರುಗಳು ದಾಖಲಾಗಿದ್ದವು. ಈ ಕುರಿತು ಜಸ್ಟೀಸ್ ಮನ್ಮೋಹನ್ ನೇತೃತ್ವದ ಪೀಠ ವಿಚಾರಣೆ ನಡೆಸಿದೆ.ಇದೇ ವೇಳೆ ರಾಹುಲ್ ಗಾಂಧಿಗೆ ಈ ಹೇಳಿಕೆ ಕುರಿತು ನೋಟಿಸ್ ನೀಡಲಾಗಿದೆ. ಆದರೆ ರಾಹುಲ್ ಗಾಂಧಿ ಉತ್ತರ ನೀಡಿಲ್ಲ ಎಂದು ಚುನಾವಣಾ ಆಯೋಗ ಹೈಕೋರ್ಟ್ ಪೀಠದ ಮುಂದೆ ಸ್ಪಷ್ಟಪಡಿಸಿತ್ತು.ಇದೇ ವೇಳೆ ಈ ಪ್ರಕರಣದ ಕುರಿತು ರಾಹುಲ್ ಗಾಂಧಿಯಿಂದ ಹೇಳಿಕೆ ಪಡೆದು 8 ವಾರದೊಳಗೆ ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ ಎನ್ನಲಾಗಿದೆ.’ಪ್ರಧಾನಿ ಮೋದಿ ಜೇಬುಗಳ್ಳ’ ಅನ್ನೋ ರಾಹುಲ್ ಗಾಂಧಿ ಹೇಳಿಕೆ ಉತ್ತಮ ಅಭಿರುಚಿ ಹೊಂದಿದ ಹೇಳಿಕೆಯಲ್ಲ ಎಂದು ಹೈಕೋರ್ಟ್ ಸೂಚಿಸಿದೆ ಎನ್ನಲಾಗಿದೆ.
ನವೆಂಬರ್ 22 ರಂದು ರಾಜಸ್ಥಾನದ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಅವರು ವಿವಾದಿತ ಹೇಳಿಕೆ ನೀಡಿದ್ದರು.ಪ್ರಧಾನಿ ಮೋದಿ, ಉದ್ಯಮಿ ಗೌತಮ್ ಅದಾನಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರು ಜೇಬುಗಳ್ಳರು ಎಂದು ಹೇಳಿದ್ದರು. ಇವರು ಒಗ್ಗಟ್ಟಿನಿಂದ ಬಂದು ಜನರ ದರೋಡೆ ಮಾಡುತ್ತಾರೆ. ಜೇಬುಗಳ್ಳರು ಹೆಚ್ಚಾಗಿ 3 ಜನರ ತಂಡ ಹೊಂದಿರುತ್ತಾರೆ. ಮೊದಲನೆಯವ ಜನರ ಗಮನವನ್ನು ಬೇರೆಡೆ ಹರಿಸಲು ನಿರತನಾಗಿದ್ದರೆ, ಮತ್ತೊಬ್ಬ ಹಿಂದಿನಿಂದ ಜೇಬುಗಳ್ಳತನ ಮಾಡುತ್ತಾನೆ.ಮತ್ತೊಬ್ಬ ಹೊರಗಿನಿಂದ ಯಾರೂ ಗಮನಿಸುತ್ತಿಲ್ಲವೆಂದು ಖಾತರಿ ಮಾಡಿಕೊಳ್ಳುತ್ತಿರುತ್ತಾನೆ.ಅದೇ ರೀತಿ ಮೋದಿ ಅವರು ಟಿವಿಯಲ್ಲಿ ಜನರನ್ನು ಉದ್ದೇಶಿಸಿ ಅಭಿವೃದ್ಧಿ ಹಾಗೂ ಇತರ ವಿಷಯಗಳಲ್ಲಿ ಪ್ರಚೋದನಾತ್ಮಕವಾಗಿ ಭಾಷಣ ಮಾಡುತ್ತಿರುತ್ತಾರೆ. ಆಗ ಅದಾನಿ ಇನ್ನೊಂದು ಕಡೆಯಿಂದ ಜನರ ಸಂಪತ್ತನ್ನು ಹಗಲುದರೋಡೆ ಮಾಡುತ್ತಿರುತ್ತಾರೆ. ಮತ್ತೊಂದೆಡೆ ಅಮಿತ್ ಶಾ ಕಾವಲುಗಾರನಾಗಿದ್ದು, ಯಾರಾದರೂ ಪ್ರಶ್ನಿಸಲು ಬಂದರೆ ಅವರ ಮೇಲೆ ದೇಶದ್ರೋಹ, ವಂಚನೆ ಮುಂತಾದ ಪ್ರಕರಣ ದಾಖಲಿಸಿ ತೆಪ್ಪಗಾಗಿಸುತ್ತಾರೆ ಎಂದು ಟೀಕಿಸಿದ್ದರು.
ಈ ಪ್ರಕರಣದ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಹೈಕೋರ್ಟ್ ಪೀಠದ ಮುಂದೆ ಭರವಸೆ ನೀಡಿದೆ. ಜೇಬುಗಳ್ಳ ಹೇಳಿಕೆಗೂ ಮೊದಲು, ಪ್ರಧಾನಿ ಮೋದಿ ಅಪಶಕುನ(ಪನೌತಿ) ಅನ್ನೋ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ನೋಟಿಸ್ ನೀಡಿದೆ. ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮೋದಿ ಹಾಜರಾಗಿದ್ದರು. ಮೋದಿ ಅಪಶಕುನ. ಹೀಗಾಗಿ ಭಾರತ ಪಂದ್ಯ ಸೋತಿತು ಎಂದು ರಾಹುಲ್ ಗಾಂಧಿ ಹೇಳಿದ್ದರು.