ನ್ಯೂಸ್ ನಾಟೌಟ್ :ಅಂಗಡಿವಾಡಿ ಸಿಬ್ಬಂದಿ ಮಾಡಿದ್ದಾರೆ ಎನ್ನಲಾದ ಆ ಎಡವಟ್ಟಿನಿಂದಾಗಿ ಮಗುವೊಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದ ದಾರುಣ ಘಟನೆಯೊಂದು ಹುಬ್ಬಳ್ಳಿಯಿಂದ ವರದಿಯಾಗಿತ್ತು.ಇದೀಗ ಆ ಘಟನೆ ಹೇಗಾಯಿತು ಅನ್ನೋದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಇದು ಓವರ್ಡೋಸ್ (Vaccine Overdose alleged) ಆದ ಪರಿಣಾಮವಾಗಿ ಸಂಭವಿಸಿದೆ (Child death) ಎಂದು ಮನೆಯವರು ಆರೋಪ ಮಾಡುತ್ತಿದ್ದರೆ, ಇತ್ತ ವೈದ್ಯರು ಆ ರೀತಿ ಆದ ಉದಾಹರಣೆಗಳಿಲ್ಲ ಎನ್ನುತ್ತಿದ್ದಾರೆ.ಹುಬ್ಬಳ್ಳಿಯ ಉಣಕಲ್ನಲ್ಲಿ ಘಟನೆ ನಡೆದಿದ್ದು ಧ್ರುವ ಎನ್ನುವ ಬಾಲಕನೇ ಕೊನೆಯುಸಿರೆಳೆದಾತ. ಡಿಸೆಂಬರ್ 20ರಂದು ಲಸಿಕೆ ನೀಡಲಾಗಿದ್ದು, ಡಿಸೆಂಬರ್ 21ರಂದು ಏಕಾಏಕಿಯಾಗಿ ಮಗು ಬಾರದ ಲೋಕಕ್ಕೆ ತೆರಳಿದೆ.
ಅಜ್ಜಿ ತಾನು ಮಗುವನ್ನು ನೋಡಿಕೊಳ್ಳುತ್ತೇನೆಂದು ಮಗಳಿಗೆ ಹೇಳಿದ್ದರು ಎನ್ನಲಾಗಿದೆ.ಹೀಗಾಗಿ ಅಜ್ಜಿಯೇ ಅಂಗನವಾಡಿ ಬಳಿ ಕರೆದುಕೊಂಡು ಬಂದು ಲಸಿಕೆ ನೀಡಿದ್ದರು.ಧ್ರುವನ ತಂದೆ ತಾಯಿ ಇರುವುದು ಬೇರೆ ಕಡೆ. ಆತ ಉಣಕಲ್ನಲ್ಲಿರುವ ಅಜ್ಜಿ ಮನೆಯಲ್ಲಿದ್ದ. ಮಕ್ಕಳಿಗೆ 16ರಿಂದ 24 ತಿಂಗಳ ನಡುವೆ ಐದು ಲಸಿಕೆಗಳನ್ನು ನೀಡುವುದು ರೂಢಿ. ಅದರಲ್ಲಿ ಮೂರು ಇಂಜೆಕ್ಷನ್ ಮೂಲಕ ಮತ್ತು ಎರಡನ್ನು ಬಾಯಿ ಮೂಲಕ ನೀಡಲಾಗುತ್ತದೆ. ಡಿಪಿಟಿ, ಎಂಆರ್, ಜಪಾನೀಸ್ ಎನ್ಸೆಫಲೈಟಿಸ್ಗೆ ಇಂಜೆಕ್ಷನ್ ನೀಡಲಾಗುತ್ತದೆ.
ಮಗುವಿಗೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಸಿಬ್ಬಂದಿ ಲಸಿಕೆ ಕೊಡಿಸುವಂತೆ ಸೂಚಿಸಿದ್ದರು. ಅದರಂತೆ ಡಿಸೆಂಬರ್ 28ರಂದು ಮಧ್ಯಾಹ್ನ ಸಾಯಿನಗರದ ಅಂಗನವಾಡಿಯೊಂದರಲ್ಲಿ ಮಗುವಿಗೆ ಲಸಿಕೆ ಹಾಕಿಸಿದ್ದರು ಅಜ್ಜಿ ಮಲ್ಲಮ್ಮ.ಒಂದೇ ದಿನ ಬೆನ್ನು ಬೆನ್ನಿಗೆ ಐದು ಲಸಿಕೆಗಳನ್ನು ಮಗುವಿಗೆ ನೀಡಲಾಗಿತ್ತು. ಆಶಾ ಕಾರ್ಯಕರ್ತೆಯರು ಇಂಜೆಕ್ಷನ್ ನೀಡಿದ್ದರು.ಲಸಿಕೆ ಹಾಕಿಸಿದ ಬಳಿಕ ಜ್ವರ ಬರಬಹುದು, ಜ್ವರ ಬಂದರೆ ಈ ಮಾತ್ರೆಯನ್ನು ನಾಲ್ಕು ಭಾಗ ಮಾಡಿ ಒಂದು ಭಾಗ ಕೊಡಿ ಎಂದು ಸೂಚಿಸಲಾಗಿತ್ತು. ಅದರಂತೆಯೇ ಮಗುವಿಗೆ ಜ್ವರ ಬಂದಿತ್ತು. ಮನೆಯವರು ಮೂರು ಹೊತ್ತು ಕಾಲುಭಾಗ ಮಾತ್ರೆಯನ್ನು ನೀಡಿದ್ದಾರೆ.
ಹೀಗೆ ಮನೆಗೆ ಬಂದಾಗ ತೀವ್ರ ಜ್ವರ ಹಾಗೂ ಹೊಟ್ಟೆ ನೊವಿನಿಂದ ಮಗು ಬಳಲುತ್ತಿತ್ತು. ಗುರುವಾರ ಬೆಳಗ್ಗೆ ಸುಧಾರಿಸಿತ್ತು ಎನ್ನಲಾಗಿದೆ. ಆದರೆ, ಮಧ್ಯಾಹ್ನ ಒಮ್ಮಿಂದೊಮ್ಮೆಗೇ ಮತ್ತೆ ಆರೋಗ್ಯದಲ್ಲಿ ಏರು ಪೇರಾಗಿದೆ. ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದೆ. ಕೂಡಲೇ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗು ಪ್ರಜ್ಞೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು.
ಎಂಥ ನೋವಿನ ವಿಚಾರವೆಂದರೆ, ಇನ್ನೂ ಬಾಳಿ ಬದುಕಬೇಕಾದ ಮುದ್ದು ಕಂದಮ್ಮ ಉಸಿರು ಚೆಲ್ಲಿದೆ.ಈ ಘಟನೆ ಕೇಳುವಾಗ ಎಂಥವರ ಮನಸ್ಸಾದರೂ ಕರಗದಿರದು.ಆಟ ಆಡಿಕೊಂಡು ಚೆನ್ನಾಗಿದ್ದ ಆ ಕಂದ ಇನ್ನಿಲ್ಲ ಅನ್ನೋದನ್ನ ಸಹಿಸಿಕೊಳ್ಳೋದಾದರೂ ಹೇಗೆ? ಮಗುವನ್ನು ಇನ್ನಿಲ್ಲ ಅನ್ನೋದನ್ನು ಅಜ್ಜಿಯಾದರೂ ಹೇಗೆ ಸಹಿಸಿಕೊಂಡಾರು. ನಾನು ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಇಲ್ಲಿ ಇಟ್ಟುಕೊಂಡೆ. ಈಗ ನನ್ನ ಮಗಳು ಬಂದು ಕೇಳಿದರೆ ನಾನು ಏನು ಹೇಳಲಿ. ನನ್ನ ಮಗುವನ್ನು ಯಾಕೆ ಹೀಗೆ ಮಾಡಿದರು ಎಂದು ಬೊಬ್ಬಿಡುತ್ತಿದ್ದ ದೃಶ್ಯ ಕರುಳು ಕಿವುಚುವಂತಿತ್ತು.
ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್ ಅವರ ಪ್ರಕಾರ ಕಿಮ್ಸ್ಗೆ ಬರುವ ಹೊತ್ತಿಗೆ ಕೊನೆಯುಸಿರೆಳೆದಿತ್ತು. ಆದರೆ, ಇದಕ್ಕೆ ಕಾರಣವಾದ ಅಂಶಗಳನ್ನು ಪರೀಕ್ಷೆಯ ಬಳಿಕವೇ ತಿಳಿಯಬೇಕಾಗಿದೆ. ಅವರ ಪ್ರಕಾರ, ಈ ರೀತಿ ಲಸಿಕೆಗಳನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆ. ಬೇರೆ ಎಲ್ಲೂ ಸಮಸ್ಯೆಗಳಾದ ವರದಿಗಳಿಲ್ಲ. ಒಂದು ವೇಳೆ ಲಸಿಕೆಯಿಂದ ಸಮಸ್ಯೆ ಆಗಿದ್ದರೆ ಅದು ತಕ್ಷಣವೇ ಗೊತ್ತಾಗಬೇಕಾಗಿತ್ತು. ಒಂದು ದಿನದ ಬಳಿಕ ಗೊತ್ತಾಗುವುದಿಲ್ಲ ಎಂದಿದ್ದಾರೆ.