ನ್ಯೂಸ್ ನಾಟೌಟ್ : ಭಾಷೆ ಎನ್ನುವುದು ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ.ಪ್ರತಿ ಊರು, ಜಿಲ್ಲೆ, ದೇಶ, ವಿದೇಶ ಹೀಗೆ ಎತ್ತ ಹೋದರೂ ನಾವೆಷ್ಟು ಭಾಷೆ ಕಲಿತಿರುತ್ತೆಯೆಯೋ ಅದು ಉಪಯೋಗಕ್ಕೆ ಬರುತ್ತದೆ.ಪ್ರತಿಯೊಂದು ಭಾಷೆ ಕೂಡ ತನ್ನದೆ ಆಗಿರುವ ಸಂಸ್ಕೃತಿ ಹಾಗೂ ಭಾಷೆಯನ್ನು ಹೊಂದಿವೆ. ಇದೀಗ ಅಚ್ಚರಿಯ ವಿಷಯವೆಂದರೆ ಇಲ್ಲೊಬ್ಬಳು 7 ವರ್ಷದ ಪುಟ್ಟ ಬಾಲಕಿ ಬರೋಬ್ಬರಿ 7 ಭಾಷೆ ಮಾತನಾಡುವ ಮೂಲಕ ಸುದ್ದಿಯಾಗಿದ್ದಾಳೆ.
ಟಿವಿ ಶೋ ಲಿಟಲ್ ಬಿಗ್ ಶಾಟ್ಸ್ನಿಂದ ಬಂದಿದೆ. ಇದರಲ್ಲಿ ಪ್ರಪಂಚದಾದ್ಯಂತದ ಪ್ರತಿಭಾವಂತ ಮಕ್ಕಳನ್ನು ಆಹ್ವಾನಿಸಲಾಗಿದೆ. ಹುಡುಗಿಯರು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನನಗೆ ವಿವಿಧ ಭಾಷೆಗಳು ಅರ್ಥವಾಗುತ್ತವೆ . ರಷ್ಯನ್, ಇಂಗ್ಲಿಷ್, ಅರೇಬಿಕ್, ಇಟಾಲಿಯನ್, ಸ್ಪ್ಯಾನಿಷ್, ಜರ್ಮನ್, ಚೈನೀಸ್ ತಿಳಿದಿದೆ ಎಂದು ಬಾಲಕಿ ಹೇಳುತ್ತಾಳೆ. ಹುಡುಗಿ ಎಲ್ಲಾ ಭಾಷೆಗಳನ್ನು ಒಂದೊಂದಾಗಿ ಹೇಗೆ ಮಾತನಾಡುತ್ತಾಳೆ ಎಂಬುದನ್ನು ವೀಡಿಯೊದಲ್ಲಿ ನೀವು ನೋಡಬಹುದು. ಜರ್ಮನ್ನಿಂದ ಪ್ರಾರಂಭಿಸಿ, ಅರೇಬಿಕ್, ಸ್ಪ್ಯಾನಿಷ್, ಚೈನೀಸ್ ಸೇರಿದಂತೆ ಎಲ್ಲಾ ಭಾಷೆಗಳನ್ನು ಮಾತನಾಡುವ ಮೂಲಕ ಅವಳು ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತಾಳೆ.