ಮಸೀದಿ ಬಳಿ ಕೇಸರಿ ಧ್ವಜ ಕಟ್ಟಿದ್ದಕ್ಕೆ ಹಲ್ಲೆ ನಡೆಸಿದರಾ..? ಆ ರಾತ್ರಿ ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದದ್ದೇನು?

ನ್ಯೂಸ್ ನಾಟೌಟ್: ಮಸೀದಿಯ ಸಮೀಪ ಕೇಸರಿ ಧ್ವಜ ಕಟ್ಟುವುದಕ್ಕೆ ವಿರೋಧ ವ್ಯಕ್ತಪಡಿಸಿ ಧ್ವಜ ಕಟ್ಟುತ್ತಿದ್ದ ದತ್ತ ಮಾಲಾಧಾರಿಗಳ (Datta Mala) ಮೇಲೆ ಹ* ಲ್ಲೆ ಮಾಡಲಾಗಿದೆ ಎಂಬ ಆರೋಪ ಚಿಕ್ಕಮಂಗಳೂರಿನಲ್ಲಿ ಇಂದು(ಡಿ.22) ಕೇಳಿಬಂದಿದೆ. ದತ್ತಜಯಂತಿ ಹಿನ್ನೆಲೆ ದತ್ತಮಾಲಾಧಾರಿಗಳು ಗ್ರಾಮದೆಲ್ಲೆಡೆ ಅಲಂಕಾರ ಮಾಡುತ್ತಿದ್ದಾರೆ. ಕೇಸರಿ ಧ್ವಜ ನೆಟ್ಟಿ ಗ್ರಾಮವನ್ನೆಲ್ಲ ಕೇಸರಿಮಯವನ್ನಾಗಿಸುತ್ತಿದ್ದಾರೆ. ಸದ್ಯ ಹಾಂದಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಅಲಂಕಾರ ಮಾಡುತ್ತಿದ್ದ ವೇಳೆ ಮಸೀದಿ ಸಮೀಪ ಧ್ವಜ ಕಟ್ಟದಂತೆ ಮುಸ್ಲಿಂ ಯುವಕರ ತಂಡ ದತ್ತಮಾಲಾಧಾರಿಗಳ ಮೇಲೆ ದಾಳಿ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದಲ್ಲಿ ಮುಸ್ಲಿಂ ಯುವಕರು ದತ್ತಮಾಲಾಧಾರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲಂಕಾರ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಭಜರಂಗದಳ ಕಾರ್ಯಕರ್ತರು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ. ದತ್ತಜಯಂತಿ ಹಿನ್ನೆಲೆ VHP ಭಜರಂಗದಳ ಕಾರ್ಯಕರ್ತರು ದತ್ತಮಾಲೆ‌ ಧರಿಸಿದ್ದರು. ಘಟನೆ ಬಳಿಕ ಸ್ಥಳಕ್ಕೆ‌ ಆಲ್ದೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ, ದತ್ತಪೀಠದಲ್ಲಿ ಡಿಸೆಂಬರ್​ 24, 25 ಮತ್ತು 26ರಂದು ದತ್ತಜಯಂತಿ ನಡೆಯಲಿದೆ. ಹೀಗಾಗಿ ಡಿಸೆಂಬರ್ 22ರಿಂದ 27ರವರೆಗೆ ಈ ಪ್ರದೇಶದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ.