ನ್ಯೂಸ್ ನಾಟೌಟ್ : ‘ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘ’ದ ಸದಸ್ಯರು ಒಟ್ಟುಗೂಡಿ ವಿಚಿತ್ರ ಪ್ರತಿಭಟನೆಯೊಂದನ್ನು ಮಾಡಿದ್ದಾರೆ.ಹೌದು,ಈ ಪ್ರತಿಭಟನೆಯಲ್ಲಿ ಅವರ ಬೇಡಿಕೆಗಳೇನು ಇರಬಹುದೆಂದು ನೀವು ಕೇಳ್ತಿದ್ದೀರಾ?ಅವರ ಪ್ರಮುಖ ಬೇಡಿಕೆ ಇಷ್ಟೇ “ನಮ್ಮನ್ನು ಕುಡುಕರು ಎಂದು ಕರೆಯಬಾರದು,ಮದ್ಯಪ್ರಿಯರು ಎಂದು ಮರ್ಯಾದೆ ಕೊಟ್ಟು ಕರೆಯಬೇಕು.ನಮಗೂ ಸ್ವಲ್ಪ ಮರ್ಯಾದೆ ಕೊಡಿ’ ಎಂದು ಕಂಡಿಷನ್ ಹಾಕಿದ್ದಾರೆ..!
ಸರ್ಕಾರಕ್ಕೆ ಅತ್ಯಧಿಕ ತೆರಿಗೆ ನೀಡುವ ಗ್ರಾಹಕರು ನಾವು ಆದ್ದರಿಂದ ನಮ್ಮ ಬೇಡಿಕೆಯನ್ನು ಮನ್ನಿಸಿ ಈಡೇರಿಸಿ ಎಂದು ತಮ್ಮ ಬೇಡಿಕೆಗಳನ್ನು ಮಂಡಿಸಲು ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿಯ ಪ್ರತಿಭಟನಾ ಟೆಂಟ್ನಲ್ಲಿ ಈ ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.’ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟಗಾರರ ಸಂಘ’ (ಕರ್ನಾಟಕ ಮದ್ಯಪ್ರಿಯರ ಸಂಘ) ತಾವೇ ಹೆಸರಿಟ್ಟುಕೊಂಡಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಪತ್ರ ಸಲ್ಲಿಸಿ, 20 ಬೇಡಿಕೆಗಳನ್ನು ಪಟ್ಟಿ ಮಾಡಿದ್ದಾರೆ.ಅದರಲ್ಲಿ ಮೊದಲನೆಯದು, ಇನ್ನು ಮುಂದೆ ಅವರನ್ನು ‘ಕುಡುಕರು’ ಎಂದು ಕರೆಯಬಾರದು. ಗೌರವಯುತವಾಗಿ ‘ಮದ್ಯ ಪ್ರಿಯರು’ ಎಂದು ಕರೆಯಬೇಕೆಂಬುದು ಪ್ರಮುಖವಾಗಿತ್ತು.
೧.ಮದ್ಯ ಮಾರಾಟದಿಂದ ಬರುವ ವಾರ್ಷಿಕ ಆದಾಯದಲ್ಲಿ ಶೇ 10 ರಷ್ಟು ಮದ್ಯ ಗ್ರಾಹಕರ ಕಲ್ಯಾಣಕ್ಕಾಗಿ ಮೀಸಲಿಡಬೇಕು
೨.ಮದ್ಯಪಾನ ಮಾಡುವವರ ಪ್ರತಿಭಾವಂತ ಮಕ್ಕಳಿಗೆ ಮಾಸಿಕ ವಿದ್ಯಾರ್ಥಿ ವೇತನ ನೀಡಬೇಕು
೩.ಸಮುದಾಯಕ್ಕೆ ಮಂಡಳಿ ಸ್ಥಾಪಿಸಬೇಕು
೪. 10 ಲಕ್ಷ ಪರಿಹಾರ ನೀಡಬೇಕು
೫.ಮದ್ಯ ಪ್ರಿಯರು ಕುಡಿತದ ಚಟದಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ, ಅವರ ಕುಟುಂಬದ ಸದಸ್ಯರ ಮದುವೆ ಸಮಾರಂಭಗಳಿಗೆ 2 ಲಕ್ಷ ರೂಪಾಯಿ ನೀಡಬೇಕು.
೬.ಗುಣಮಟ್ಟದ ಆಹಾರ ಮತ್ತು ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಸ್ವಚ್ಛ ಶೌಚಾಲಯದಂತಹ ಹಲವಾರು ಬೇಡಿಕೆ
೭. ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಸರ್ಕಾರವು ಮದ್ಯದ ಬೆಲೆಯನ್ನು ಹೆಚ್ಚಿಸಬೇಕು.
೮.ಮದ್ಯದ ಬಾಟಲಿಗಳ ಮೇಲೆ ಎಂಆರ್ಪಿಗಿಂತ ಹೆಚ್ಚಿನ ಹಣ ಕೇಳುವ ಬಾರ್ ಮತ್ತು ಮದ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಿ
೯.ಕೆಲವು ಸ್ಥಳಗಳಲ್ಲಿ ದೇವಾಲಯ ಮತ್ತು ಶಾಲಾ ಆವರಣದಲ್ಲಿ ಬಾರ್ಗಳನ್ನು ತೆರೆಯಲಾಗಿದೆ. ಈ ಸ್ಥಳಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ತಕ್ಷಣವೇ ಮುಚ್ಚಬೇಕು.
೧೦. ಮದ್ಯದಂಗಡಿ ತೆರೆಯುವಾಗ ಸೂಕ್ತವಾದ ಭೂಮಿಯನ್ನು ಆಯ್ಕೆ ಮಾಡಬೇಕು ಹೀಗೆ ೨೦ ಬೇಡಿಕೆಗಳನ್ನು ಇಟ್ಟಿದ್ದಾರೆ.
ಸಚಿವ ಸಂತೋಷ್ ಲಾಡ್ ಮನವಿ ಪತ್ರ ಸ್ವೀಕರಿಸಿ, ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.