ನ್ಯೂಸ್ ನಾಟೌಟ್ : ಬಾಲಕ ಶಿವಕುಮಾರ್ (13) ಶಾಲೆಯಲ್ಲಿ ಆಟವಾಡುವಾಗ ಸೂಚನಾ ಫಲಕದ ಗುಂಡುಸೂಜಿಯನ್ನು (Pin) ಆಕಸ್ಮಿಕವಾಗಿ ನುಂಗಿದ್ದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮುಚ್ಚುಳ ಕ್ಯಾಂಪ್ನಲ್ಲಿ ನಡೆದಿದೆ.
ಗುಂಡುಸೂಜಿ ಬಲ ಶ್ವಾಸಕೋಶದೊಳಗಡೆ ಸೇರಿತ್ತು. ಇದೀಗ ಬ್ರಾಂಕೋಸ್ಕೋಪ್ ಮೂಲಕ ಗುಂಡುಸೂಜಿಯನ್ನು ಹೊರತೆಗೆಯುವಲ್ಲಿ ರಿಮ್ಸ್ (RIMS) ವೈದ್ಯರು (Doctor) ಯಶಸ್ವಿಯಾಗಿದ್ದಾರೆ.
ಚಿಕಿತ್ಸೆಗಾಗಿ ಬಾಲಕನನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ಬಾಲಕನ ಶ್ವಾಸಕೋಶಕ್ಕೆ ಕ್ಷ-ಕಿರಣವನ್ನು ಮಾಡಿಸಿದಾಗ ಬಲ ಶ್ವಾಸಕೋಶದಲ್ಲಿ ಸೂಚನಾ ಫಲಕದ ಗುಂಡುಸೂಜಿ ಇರುವುದು ಖಚಿತಪಡಿಸಿಕೊಂಡು ಬ್ರಾಂಕೋಸ್ಕೋಪ್ ಮೂಲಕ ಗುಂಡು ಸೂಜಿಯನ್ನು ಹೊರತೆಗೆಯಲಾಗಿದ್ದು, ಅಪರೂಪದ ಪ್ರಕರಣದಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.