- +91 73497 60202
- [email protected]
- November 23, 2024 1:00 AM
ನ್ಯೂಸ್ ನಾಟೌಟ್ : ಕಾಡಿನಲ್ಲಿ ಕಣ್ಮರೆಯಾಗಿದ್ದ ಬೆಳಗಾವಿ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳನ್ನು (Students) ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ ಘಟನೆ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಲ್ವಾಣಿ ಫಾಲ್ಸ್ ನ ಅರಣ್ಯದಲ್ಲಿ ನಡೆದಿದೆ. ಚಾರಣಕ್ಕೆಂದು ಹೋಗಿ ಕಣ್ಮರೆಯಾಗಿದ್ದ 9 ವಿದ್ಯಾರ್ಥಿಗಳು ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಲ್ವಾಣಿ ಫಾಲ್ಸ್ (Jalwani Falls) ನೋಡುವ ಸಲುವಾಗಿ ಕಣಕುಂಬಿ ಅರಣ್ಯ ಪ್ರದೇಶದ ಮೂಲಕ ತೆರಳಿದ್ದರು ಎನ್ನಲಾಗಿದೆ. ಈ ಯುವಕರು ಪಾರವಾಡ ಗ್ರಾಮದಿಂದ ಮೂರು ಕಿಲೋಮೀಟರ್ ಬೈಕ್‌ನಲ್ಲಿ ತೆರಳಿದ್ದು, ಬಳಿಕ ಕಾಲು ದಾರಿಯಲ್ಲೇ ಜಲ್ವಾಣಿ ಫಾಲ್ಸ್‌ಗೆ ತೆರಳಿದ್ದಾರೆ. ಶುಕ್ರವಾರ ಸಂಜೆ (ಡಿ.29) ಮರಳಿ ಬರುವ ವೇಳೆ ದಾರಿ ತಿಳಿಯದೇ ಯುವಕರು ದಟ್ಟ ಕಾಡಿನಲ್ಲಿ ಕಣ್ಮರೆಯಾದ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಯುವಕರು ಸ್ನೇಹಿತರಿಗೆ ಫೋನ್ ಮಾಡಿ ಕಾಡಿನಲ್ಲಿ ಕಣ್ಮರೆಯಾಗಿರುವ ಕುರಿತು ಮಾಹಿತಿ ತಿಳಿಸಿದ್ದಾರೆ. ಇದಾದ ಬಳಿಕ ರಾತ್ರಿಯಿಡೀ ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ 30 ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕಾಡಿನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಇನ್ನು ಅಕ್ರಮ ಅರಣ್ಯ ಪ್ರದೇಶ ಪ್ರವೇಶ ಆರೋಪದಡಿ ಗೋವಾ ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ